×
Ad

ಪುತ್ತೂರು: ಅತುಲ್ ಎಂ.ಭಟ್ ಗೆ ರಾಜ್ಯಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ

Update: 2017-01-28 18:16 IST

ಪುತ್ತೂರು, ಜ. 28: ಇಲ್ಲಿನ ಸುದಾನ ವಸತಿಯುತ ಶಾಲೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿ ಅತುಲ್ ಎಂ.ಭಟ್ ಪ್ರೌಢಶಾಲಾ ವಿಭಾಗದ ಕರಾಟೆ ಬ್ಲಾಕ್ ಬೆಲ್ಟ್ - 50 ಕೆ.ಜಿ ಮೇಲ್ಪಟ್ಟ ಹುಡುಗರ ಕುಮಿಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಕಟಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇತ್ತೀಚೆಗೆ ಮಂಗಳೂರಿನ ಸರ್ವಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರಿನ ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸ್ಪಧೆಯಲ್ಲಿ ಅತುಲ್ ಈ ಸಾಧನೆ ಮಾಡಿದ್ದಾರೆ. ಇವರು ಗಿಳಿಯಾಲಿನ ಅವಿನಾಶ್ ಜಿ.ಕೆ ಹಾಗು ವಿವೇಕಾನಂದ ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ.ಆಶಾ ಸಾವಿತ್ರಿ ಪುತ್ರ ಹಾಗೂ ಪುತ್ತೂರಿನ ರಹಾನ್ ಸುರೇಶ್ ಅವರ ಶಿಷ್ಯನಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News