×
Ad

ಉಡುಪಿ: ರಸ್ತೆ ಸುರಕ್ಷಾ ಅಭಿಯಾನಕ್ಕೆ ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ್ ಚಾಲನೆ

Update: 2017-01-28 19:36 IST

ಉಡುಪಿ, ಜ.28: ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 150ಕ್ಕೂ ಹೆಚ್ಚು ಮರಣಾಂತಿಕ ಸೇರಿದಂತೆ ಒಟ್ಟು 1200ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ. ಚಾಲನಾ ಅಪರಾಧಗಳಿಗೆ ಸಂಬಂಧಿಸಿದಂತೆ ಪೋಲೀಸ್ ಇಲಾಖೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿಗೆ ದಂಡ ವಿಧಿಸಿ, ಒಂದು ಕೋಟಿ ರೂ.ಗೂ ಹೆಚ್ಚು ದಂಡ ವಸೂಲಿ ಮಾಡಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.

ಕಟಪಾಡಿ ಜೇಸಿಐ ವತಿಯಿಂದ ಹಮ್ಮಿಕೊಳ್ಳಲಾದ ರಸ್ತೆ ಸುರಕ್ಷಾ ಅಭಿ ಯಾನಕ್ಕೆ ಶುಕ್ರವಾರ ಕಟಪಾಡಿಯಲ್ಲಿ ಚಾಲನೆ ನೀಡಿ ಅವರು ಮಾತನಾಡುತಿ ದ್ದರು. ಚಾಲನಾ ನಿಯಮಗಳ ಉಲ್ಲಂಘನೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಕೊಳ್ಳಲಾಗುತ್ತಿದ್ದು, ಇದರಿಂದ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ ವಾಗುತ್ತಿದೆ ಎಂದರು.

ಜೇಸಿಐ ವತಿಯಿಂದ ಕಾಪುವಿನಿಂದ ಕಲ್ಯಾಣಪುರದವರೆಗೆ ರಾಷ್ಟ್ರೀಯ ಹೆದ್ದಾರಿ66ರ ಡಿವೈಡರ್‌ನಲ್ಲಿ ಅಳವಡಿಸಲಾದ ಅಪಘಾತ ಎಚ್ಚರಿಕೆ ಫಲಕ ಗಳನ್ನು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು.

ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಜೆಸಿಐ ವಲಯಾಧ್ಯಕ್ಷ ಸಂತೋಷ್ ಕುಮಾರ್, ಕಟಪಾಡಿ ಗ್ರಾಪಂ ಅಧ್ಯಕ್ಷೆ ಜೂಲಿಯಟ್ ವೀರಾ ಡಿಸೋಜ, ಕಾಪು ಠಾಣಾ ಧಿಕಾರಿ ಜಗದೀಶ್ ರೆಡ್ಡಿ, ಉಡುಪಿ ನಗರ ಠಾಣೆಯ ಠಾಣಾಧಿಕಾರಿ ಅನಂತ ಪದ್ಮನಾಭ ಕೆ.ವಿ., ಸಂಚಾರ ಠಾಣೆ ಎಸ್‌ಐ ವೆಂಕಟೇಶ್, ಸಿಲಾಸ್ ಇಂಟರ್ ನ್ಯಾಶನಲ್ ಶಾಲೆಯ ಉಪಾಧ್ಯಕ್ಷ ಸಂತೋಷ್ ಮೆಬೆನ್, ಜೆಸಿಐ ವಲಯ ಉಪಾಧ್ಯಕ್ಷ ಸರ್ವಜ್ಞ ತಂತ್ರಿ, ಜೆಸಿಐ ರಕ್ತದಾನ ವಿಭಾಗದ ವಲಯ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಪೊಲೀಸ್ ಅಧಿಕಾರಿ ಪುರುಷೋತ್ತಮ ಮುಖ್ಯ ಅತಿಥಿ ಗಳಾಗಿದ್ದರು.

ಕಟಪಾಡಿ ಜೆಸಿಐ ಅಧ್ಯಕ್ಷೆ ಪ್ರಮಿಳಾ ಜತ್ತನ್ನ, ಪೂರ್ವಾಧ್ಯಕ್ಷ ರಂಜಿತ್ ಆರ್.ಸುವರ್ಣ, ಮಹೇಶ್ ಅಂಚನ್, ಕಾರ್ಯದರ್ಶಿ ಸುರೇಶ್ ಪೂಜಾರಿ, ಜೇಸಿರೇಟ್ ಅಧ್ಯಕ್ಷೆ ಮಾಲತಿ ದಿನೇಶ್, ಯುವ ಜೇಸಿ ಅಧ್ಯಕ್ಷ ಕಾರ್ತಿಕ್ ಡಿ ಪೂಜಾರಿ, ಕಾರ್ಯಕ್ರಮ ನಿರ್ದೇಶಕ ಮೋಹನ್ ಅಂಚನ್, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News