×
Ad

ಸೈಂಟ್ ಜೊಸೆಫ್ ಇಂಜಿನಿಯರಿಂಗ್ ಕಾಲೇಜ್ ಎನ್‌ಬಿಎ(ಎಕ್ರೆಡಿಶನ್) ಮಾನ್ಯತೆ ನವೀಕರಣ

Update: 2017-01-28 20:04 IST

ಮಂಗಳೂರು.ಜ.28:ನಗರದ ಸೈಂಟ್ ಜೊಸೆಫ್ ಇಂಜಿನಿಯರಿಂಗ್ ಕಾಲೇಜ್‌ಗೆ ದೆಹಲಿಯ ನ್ಯಾಶನಲ್ ಬೋರ್ಡ್ ಆಫ್ ಎಕ್ರೆಡಿಶನ್ ವತಿಯಿಂದ 2013ರಲ್ಲಿ ದೊರೆತಿದ್ದ ಮಾನ್ಯತೆ 2016ರಿಂದ 2019ರವರೆಗೆ ಮೂರು ವರ್ಷದ ಅವಧಿಗೆ ನವೀಕರಣಗೊಂಡಿದೆ ಎಂದು ಸಂಸ್ಥೆಯ ನಿರ್ದೇಶಕ ವಂ.ಜೋಸೆಫ್ ಲೋಬೊ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

ನವೆಂಬರ್ 14ರಿಂದ16,2016ರಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಎನ್‌ಬಿಎ ತಂಡ ಕಾಲೇಜಿನ ಪ್ರಗತಿ ಪರಿಶೀಲನೆ ನಡೆಸಿದೆ.ಕಳೆದ 15 ವರ್ಷಗಳ ಹಿಂದೆ ವಾಮಂಜೂರಿನಲ್ಲಿ ಸ್ಥಾಪನೆಗೊಂಡಿರುವ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಪ್ರಸಕ್ತ 2500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.ಶೈಕ್ಷಣಿಕ ಗುಣಮಟ್ಟದ ಆಧಾರದಲ್ಲಿ ಎನ್‌ಬಿಎ ಮಾನ್ಯತೆ ಪಡೆದಿರುವ ಕಾಲೇಜಿನಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಪ್ರಥಮ ಸ್ಥಾನದಲ್ಲಿದೆ ಎಂದು ಜೋಸೆಫ್ ಲೋಬೊ ತಿಳಿಸಿದ್ದಾರೆ.ಸಂಸ್ಥೆಯ ಸಂಶೋಧನಾ ಯೋಜನೆಗೆ ಕರ್ನಾಟಕದ ವಿಜಿಎಸ್‌ಟಿ ಮತ್ತು ಗುಜರಾತಿನ ಪ್ಲಾಮಾ ಸಂಶೋಧನಾ ವಿಭಾಗದ ಸಂಶೋಧಕರಿಗೆ 40 ಲಕ್ಷ ರೂ ಮೊತ್ತದ ಪ್ರಶಸ್ತಿ ದೊರೆತಿದೆ. ಕೊಯಂಬತ್ತೂರಿನಲ್ಲಿ 2017ರಲ್ಲಿ ನಡೆದ ಎಂಡಿರೂ ಸ್ಟೂಡೆಂಟ್ ಇಂಡಿಯಾ ಪ್ರಶಸ್ತಿ ದೊರೆತಿದೆ. 2015-16ರಲ್ಲಿ ವಿಟಿಯುನಿಂದ ಸಂಜಯ್ ಕೆ.ಸಿ,ಯಾಝಿದ್ ಮೊಹಮ್ಮದ್,ಮ್ಯಾಥ್ಯು ಜೋಸ್ ಮೂವರು ವಿದ್ಯಾರ್ಥಿಗಳು ಎಂಟೆಕ್‌ನಲ್ಲಿ ರ್ಯಾಂಕ್ ಗಳಿಸಿದ್ದಾರೆ.ಬಿ.ಇ ವಿಭಾಗದಲ್ಲಿ ಅಸ್ಮಿತಾ ಕ್ಯಾಸ್ತಲೀನೋ ಅಲೆನ್ ಬ್ಯಾಪ್ಟಿಸ್ಟ್ ಡಿ ಸೋಜ ಎರಡು ವಿದ್ಯಾರ್ಥಿಗಳು ಚಿನ್ನದ ಪದಕಗಳಿಸಿದ್ದಾರೆ ಎಂದು ಜೋಸೆಫ್ ಲೋಬೊ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಂಗಳೂರು ಕಥೊಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಅತೀ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ ಎನ್‌ಬಿಎ ಎಕ್ರೆಡಿಶನ್ ಪತ್ರವನ್ನು ಸಂಸ್ಥೆಯ ನಿರ್ದೇಶಕ ವಂ.ಜೋಸೆಫ್ ಲೋಬೊ ಅವರಿಗೆ ಹಾಸ್ತಂತರಿಸಿದರು.ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ವಂ,ರೋಹಿತ್ ಡಿ ಕೊಸ್ತಾ,ಪ್ರಾಂಶುಪಾಲ ಡಾ.ಜೋಸೆಫ್ ಗೋನ್ಸಾಲ್ವೀಸ್,ಉಪ ಪ್ರಾಂಶುಪಾಲ ರೀಯೋ ಡಿ ಸೋಜ, ಪೋರ್‌ವಿಂಡ್ಸ್ ಸಂಸ್ಥೆಯ ನಿರ್ದೇಶಕ ಇ.ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News