ರೈತ ಸೇವಾ ಕೇಂದ್ರ ರೈತರ ಬೇಡಿಕೆ ಈಡೇರಿಸಲಿ: ಪ್ರಮೋದ್

Update: 2017-01-28 14:38 GMT

ಉಡುಪಿ, ಜ.28: ರೈತ ಸಲಹಾ ಕೇಂದ್ರಗಳು ರೈತರ ಬೇಡಿಕೆಗಳನ್ನು ಈಡೇರಿಸುವ ಕೇಂದ್ರವಾಗಲಿ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆದಿರುವ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳಕ್ಕೆ ಶನಿವಾರ ಅಪರಾಹ್ನ ಭೇಟಿ ನೀಡಿ ರೈತ ಸೇವಾ ಕೇಂದ್ರವನ್ನು ಉದ್ಘಾಟಿ ಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ರೈತ ಸೇವಾ ಕೇಂದ್ರವನ್ನು ಸ್ಥಾಪಿಸಿದ್ದು, ಈ ಕೇಂದ್ರವನ್ನು ಜಿಲ್ಲೆಯ ರೈತರ ಶ್ರೇಯೋಭಿವೃದ್ದಿಗಾಗಿ ಹಾಗೂ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಬಳಸಿಕೊಳ್ಳಿ ಎಂದು ಕರೆ ನೀಡಿದ ಅವರು, ಜಿಲ್ಲೆಯ ರೈತರ ಹಾಗೂ ಸಾರ್ವಜನಿಕರ ಸದ್ಬಳಕೆಗಾಗಿ ಈ ರೈತ ಸೇವಾ ಕೇಂದ್ರವಿರಲಿ ಎಂದು ಶುಭ ಹಾರೈಸಿದರು.

ರೈತ ಸೇವಾ ಕೇಂದ್ರದಲ್ಲಿರುವ 16 ಖಾಯಂ ಮಳಿಗೆಗಳು ಹಾಗೂ ಕ್ಯಾಂಟಿನ್‌ನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಮಿತಿ ಅರ್ಹ ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘ/ಸಂಸ್ಥೆ ವಹಿವಾಟುದಾರರು, ರೈತ ಉತ್ಪನ್ನಗಳನ್ನು ಮಾರಾಟ ಮಾಡುವ ಸರಕಾರಿ, ಖಾಸಗಿ ಹಾಗೂ ಅರೆ ಸರಕಾರಿ ಸಂಸ್ಥೆಗಳಿಂದ ಅರ್ಜಿ ಸ್ವೀರಿಸಿ ಮಳಿಗೆ ಹಂಚಿಕೆ ಮಾಡಲಾಗಿದೆ.

 ಇದು ಕೃಷಿ ಉಪಕರಣಗಳು, ಸಾವಯವ ಆಹಾರ ಪದಾರ್ಥಗಳು, ಬಯೋ ರಸಗೊಬ್ಬರಗಳು, ಮಟ್ಟುಗುಳ್ಳ, ಹಣ್ಣು ತರಕಾರಿಗಳು, ಹೂವಿನ ಅಲಂಕಾರ ಮಳಿಗೆ, ಮಹಿಳಾ ಉದ್ಯಮ, ಹಸಿರು ಛಾವಡಿ, ನೆಕ್ಟರ್ ಜೇನುತುಪ್ಪ, ಕೃಷಿ ಉಪಕರಣಗಳ ಸರ್ವಿಸ್ ಸೆಂಟರ್ ಖಾಯಂ ಮಳಿಗೆಗಳನ್ನು ಹೊಂದಿವೆ. ಜ.28ರಿಂದ ಈ ಮಳಿಗೆಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ ಎಂಬ ಮಾಹಿತಿಯನ್ನು ಈ ಸಂದರ್ಭದಲ್ಲಿ ತೋಟಾರಿಕೆ ಇಲಾಖಾ ಅಧಿಕಾರಿಗಳು ನೀಡಿದರು.

ರಾಜ್ಯದಲ್ಲಿ ತೋಟಗಾರಿಕೆ ಪಿತಾಮಹನೆನಿಸಿದ ಎಂ. ಎಚ್. ಮರಿಗೌಡರ್ ಅವರಿಗೆ ಪುಷ್ಪ ನಮನ ಸಲ್ಲಿಸಿದ ಸಚಿವರು, ಪಲಪುಷ್ಪ ಪ್ರದರ್ಶನವವನ್ನು ಸಂಪೂರ್ಣ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಜನಾರ್ಧನ ಭಂಡಾರ್ಕರ್, ಕುಂದಾಪುರ ಪುರಸಬೆ ಅಧ್ಯಕ್ಷೆ ಜಯಶ್ರೀ ಮೊಗವೀರ ಉಪಸ್ಥಿತರಿದ್ದರು.

ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ನಾಯ್ಕಿ ಉಪಸ್ಥಿತರಿದ್ದರು. ತೋಟಗಾರಿಕೆ ಇಲಾಖೆ ಸಂಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News