×
Ad

ಇರಾ ‘ಪ್ರಿಯದರ್ಶಿನಿ ಟ್ರೋಫಿ’ ಕಬಡ್ಡಿ ಪಂದ್ಯಾಟ : ಮೂಡಬಿದಿರೆ ಆಳ್ವಾಸ್ ತಂಡಕ್ಕೆ ಪ್ರಶಸ್ತಿ

Update: 2017-01-28 20:33 IST

ಕೊಣಾಜೆ,ಜ.28: ಇರಾ ವಲಯ ಹಾಗೂ ಇರಾ ಯುವಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ಇಂದಿರಾಗಾಂಧಿ ಜನ್ಮ ಶತಾಬ್ಧಿ ವರ್ಷಾಚರಣೆ ಪ್ರಯುಕ್ತ ಇರಾ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ‘ಪ್ರಿಯದರ್ಶಿನಿ ಟ್ರೋಫಿ-2017’ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಮೂಡಬಿದಿರೆಯ ಆಳ್ವಾಸ್ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ದ್ವಿತೀಯ ಪ್ರಶಸ್ತಿಯನ್ನು ಭಾರತ್ ಪ್ರೆಂಡ್ಸ್ ಕ್ಲಬ್ ಇರಾ, ತೃತೀಯ ಪ್ರೆಂಡ್ಸ್ ಭಟ್ಕಳ, ಚತುರ್ಥ ಪ್ರಶಸ್ತಿಯನ್ನು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಪಡೆದುಕೊಂಡಿತು.

ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ಹಾಗೂ ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.

ಬಹುಮಾನ ವಿತರಿಸಿ ಮಾತನಾಡಿದ ಚಂದ್ರಹಾಸ್ ಕರ್ಕೇರ ಅವರು, ಕ್ರೀಡಾಕೂಟವು ದೈಹಿಕ ದೃಡತೆಯನ್ನು ಬೆಳೆಸುತ್ತದೆ ಮಾತ್ರವಲ್ಲದೆ ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುವಲ್ಲಿಯೂ ಸಹಕಾರಿಯಾಗುತ್ತದೆ. ಇಂದಿರಾ ಗಾಂಧಿ ಅವರ ಜನ್ಮ ಶತಾಭ್ದಿ ವರ್ಷಾಚರಣೆಯ ಪ್ರಯುಕ್ತ ಕಾಂಗ್ರೆಸ್ ವತಿಯಿಂದ ನಡೆದ ಕಬ್ಬಡಿ ಪಂದ್ಯಾಟವು ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಉದ್ಯಮಿ ದಿನೇಶ್ ತಿರುವಾಲೆ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್, ಯುವಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಬಿ.ಉಮ್ಮರ್, ಮೊಯ್ದಿನ್ ಕುಂಞಿ, ಶಾಲಾಡಳಿತ ಮಂಡಲಿ ಸದಸ್ಯ ಮುರಲೀಧರ ಭಂಡಾರಿ, ಜಿ.ಎಂ.ಇಬ್ರಾಹಿಂ, ಪ್ರತಾಪ್ ಕರ್ಕೇರ, ರಾಜೇಶ್ ಶೆಟ್ಟಿ, ಯಾಕೂಬ್, ಉಸ್ಮಾನ್, ಸದಾನಂದ ಶೆಟ್ಟಿ, ವಾಮನ ಪೂಜಾರಿ, ರಿತೇಶ್, ಮೊಯ್ದಿನ್ ಕುಂಞಿ, ಲತೀಫ್ ನೇರಳಕಟ್ಟೆ, ಲತೀಪ್ ನಾಯರ್‌ಕೋಡಿ, ದಿನೇಶ್ ಮೂಳೂರು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News