×
Ad

ಮೂಡುಬಿದಿರೆಯಲ್ಲಿ ಈಜು ತರಬೇತಿ

Update: 2017-01-28 20:37 IST

ಮೂಡುಬಿದಿರೆ,ಜ.28: ರಾಜ್ಯ ಯುವ ಸಬಲೀಕರಣ ಇಲಾಖೆ, ಬೆಂಗಳೂರಿನ ವಿನ್ನಿಂಗ್ ಮ್ಯಾಟರ್ಸ್‌, ಆಸ್ಟ್‌ಸ್ವಿಮ್ ವತಿಯಿಂದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಮೂರನೇ ಹಂತದಲ್ಲಿ ರಾಜ್ಯದ ಈಜು ತರಬೇತಿ ಶಿಕ್ಷಕರಿಗೆ ಮೂಡುಬಿದಿರೆಯ ಈಜುಕೊಳದಲ್ಲಿ ಒಂದು ವಾರದ ಈಜು ತರಬೇತಿ ಶಿಬಿರ ನಡೆಯುತ್ತಿದೆ. ಈವರೆಗೆ ಒಟ್ಟು 54 ಮಂದಿ ತರಬೇತಿ ಪಡೆದುಕೊಂಡಿದ್ದು ಆಸ್ಟ್‌ಸ್ವಿಮ್‌ನ ಪಾರ್ಥ ವಾರಣಾಸಿ, ನಿರೂಪ್ ಜೆ.ಆರ್, ವಿನ್ನಿಂಗ್ ಮ್ಯಾಟರ್ಸ್‌ನ ಹಕೀಮುದ್ದೀನ್ ಹಬಿಬುಲ್ಲ ಮೂಡುಬಿದಿರೆ ಈಜುಕೊಳದ ಮುಖ್ಯಸ್ಥ ಬಿ.ವಿ, ಮಧುಕರ ಅವರು ತರಬೇತಿಗೆ ಹಾಜರಾಗಿದ್ದ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಚಿತ್ರದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News