×
Ad

ಮಹಾಮಂಗಲ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

Update: 2017-01-28 21:16 IST

ಮಂಗಳೂರು, ಜ.28: ಭಾರತೀಯ ಗೋ ತಳಿಗಳ ಬಗ್ಗೆ ಸಂಶೋಧನೆ ಇನ್ನಷ್ಟು ಹೆಚ್ಚಬೇಕು. ಗೋವಿನ ಮಹತ್ವವನ್ನು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಗೋ ಸಂಸತ್ತು ಮಹತ್ವದ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ಬ್ಯಾಂಕಿನ ಆಡಳಿತ ನಿದೇರ್ಶಕ ಹಾಗೂ ಅಧ್ಯಕ್ಷ ಡಾ.ಪಿ.ಜಯರಾಮ ಭಟ್ ಅಭಿಪ್ರಾಯಪಟ್ಟರು.

ಮಂಗಲ ಗೋಯಾತ್ರೆ ಮಹಾಮಂಗಲದ ಅಂಗವಾಗಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಣ್ಣಿನ ಮಡಿಕೆಯಲ್ಲಿ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಸೇರಿಸುವ ಮೂಲಕ ಪಂಚಗವ್ಯ ತಯಾರಿಸಿ ಶ್ರೀ ರಾಘವೇಶ್ವರ ಬಾರತೀ ಸ್ವಾಮೀಜಿಯವರಿಗೆ ಸಮರ್ಪಿಸುವ ಮೂಲಕ ಅವರು ವಿಚಾರ ಸಂಕಿರಣಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದರು.

ಗೋವಂಶ ಬಾರತೀಯ ಜನಜೀವನದ ಅವಿಬಾಜ್ಯ ಅಂಗ. ಕೃಷಿಕೋ ನಾಸ್ತಿ ದುರ್ಭಿಕ್ಷಂ ಎಂಬ ಸಂಸ್ಕೃತ ಘೋಷವಿದೆ. ಆದರೆ ಇಂದು ಕೃಷಿಯ ಸ್ಥಿತಿ ಅಧೋಗತಿಯಾಗಿದೆ. ಇದಕ್ಕೆ ಗೋವು ಆಧರಿತ ಕೃಷಿ ಪದ್ಧತಿಯನ್ನು ನಿಲ್ಕ್ಷಿಸಿದ್ದು, ಕಾರಣ. ಈ ಹಿನ್ನೆಲೆಯಲ್ಲಿ ಕೃಷಿಗೆ ಮತ್ತೆ ಪುನಶ್ಚೇತನ ನೀಡಬೇಕಾದರೆ, ಕೃಷಿಕರಲ್ಲಿ ಸ್ಫೂರ್ತಿ ತುಂಬಬೇಕಾದರೆ, ಇಂಥ ಮಹಾಯಜ್ಞ ಮಹತ್ವದ್ದು ಎಂದು ಅವರು ವಿಶ್ಲೇಷಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಬಾರತೀ ಸ್ವಾಮೀಜಿ, ಈ ಗೋಸಂಸತ್ತು ದೆಹಲಿಯ ಸಂಸತ್ತಿಗಿಂಗಲೂ ಮಹತ್ವದ್ದು. ಈ ಸಂಸತ್ತಿನ ನಿರ್ಣಯಗಳನ್ನು ದೆಹಲಿಯ ಸಂಸತ್ತು ಪರಿಗಣಿಸಿದರೆ ಇಡೀ ದೇಶಕ್ಕೆ ಒಳಿತಾಗುತ್ತದೆ. ಗೋವಿನ ಮಹತ್ವದ ವೈಜ್ಞಾನಿಕ ಅಂಶಗಳ ಬಗ್ಗೆ ವಿಜ್ಞಾನಿಗಳು ಬೆಳಕು ಚೆಲ್ಲಲಿದ್ದಾರೆ ಎಂದು ಹೇಳಿದರು.

ಮಣ್ಣಿಗೂ ಗೋವಿಗೂ ಅವಿನಾಬಾವ ಸಂಬಂಧ ಇದೆ. ಗೋಮಯ- ಗೋಮೂತ್ರ ಮಣ್ಣು ಸೇರಿದಾಗ ೂಮಿ ಸಮೃದ್ಧವಾಗುತ್ತದೆ ಎನ್ನುವುದನ್ನು ವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಕೃಷಿಗೆ ಮೂಲೂತವಾಗಿ ಇದೇ ಬಂಡವಾಳ. ಪಂಚಗವ್ಯದ ಮಹತ್ವವನ್ನು ಅರಿತರೆ ಇಡೀ ಆರ್ಥಿಕತೆ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಗೋವಿನ ಒಂದೊಂದು ಉತ್ಪನ್ನದ ಬಗ್ಗೆಯೂ ಸಂಶೋಧನೆ ನಡೆಸಲು ಒಂದೊಂದು ವಿಶ್ವವಿದ್ಯಾನಿಲಯ ಬೇಕು. ದೇಹದ ದೋಷವನ್ನು ಪರಿಹರಿಸುವಂತೆ ದೇಶದ ದೋಷವನ್ನೂ ಪರಿಹರಿಸುವ ಶಕ್ತಿ ಗೋವಿಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಹಿರಿಯ ಗೋವಿಜ್ಞಾನಿ ಕರ್ನಾಲ್‌ನ ಡಾ. ಸದಾನ ಮಾತನಾಡಿ, ದೇಸಿ ಹಾಲಿಗೆ ಪರ್ಯಾಯ ಇಲ್ಲ. ಪಂಚಗವ್ಯ ಅತ್ಯಂತ ಪವಿತ್ರ ಮಾತ್ರವಲ್ಲದೇ ಔಷಧೀಯ ಮತ್ತು ಪೌಷ್ಟಿಕ ಗುಣವನ್ನೂ ಹೊಂದಿದೆ. ಇದು ನರ ಹಾಗೂ ನ್ಯಾನೊ ಕಣದ ಹಂತದಲ್ಲೂ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಇದು ಬಹಳಷ್ಟು ವಿಜ್ಞಾನಿಗಳಿಗೇ ಗೊತ್ತಿಲ್ಲ. ನಾಲ್ಕು ವರ್ಷಕ್ಕಿಂತ ಕಡಿಮೆ ಮಕ್ಕಳಿಗಂತೂ ದೇಸಿ ಹಸುವಿನ ಹಾಲು ಬಿಟ್ಟು ಬೇರೇನನ್ನೂ ನೀಡಬೇಕಿಲ್ಲ ಎಂದು ಹೇಳಿದರು.

ಮಂಗಲಗೋಯಾತ್ರೆ ದಿಗ್ದರ್ಶಕ ಡಾ.ವೈವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಗದರ್ಶನ ಮಂಡಳಿ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಬಾಕರ ಭಟ್, ವಿಜ್ಞಾನಿಗಳಾಧ ಡಾ.ಕೆ.ಪಿ.ರಮೇಶ್, ಡಾ.ನಾರಾಯಣ ರೆಡ್ಡಿ, ಡಾ.ವಡಿವೇಲ್, ಇಂಗ್ಲೆಂಡಿನಿಂದ ಆಗಮಿಸಿದ್ದ ಡಾ.ಅಲೆಕ್ಸ್ ಹಂಕಿ, ಸ್ವಾಗತ ಸಮಿತಿ ಅದ್ಯಕ್ಷ ಡಾ.ವಿನಯ ಹೆಗ್ಡೆ ಉಪಸ್ಥಿತರಿದ್ದರು.

ನಾನೂ ಬೆರಣಿ ತಟ್ಟಿದ್ದೇನೆ

ಬಾಲ್ಯದಲ್ಲಿ ನಾನೂ ಬೆರಣಿ ತಟ್ಟಿದ್ದೇನೆ. ನಮ್ಮ ತಂದೆ- ತಾಯಿ, ಅಜ್ಜ ಅಜ್ಜಿ ಜತೆ ಸೇರಿ ಬಾಲ್ಯದಲ್ಲಿ ಗೋಸೇವೆ ಮಾಡಿದ್ದೇನೆ ಎಂಬ ಧನ್ಯತಾ ಬಾವ ನನಗಿದೆ ಎಂದು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಡಾ.ಪಿ.ಜಯರಾವ್ ಭಟ್ ಬಹಿರಂಗಪಡಿಸಿದರು.

ಸೆಗಣಿ ಕಲಸಿ ಅದನ್ನು ಬೆರಣಿಯಾಗಿ ಮಾಡಿ ತ್ತದ ಹೊಟ್ಟಿನೊಂದಿಗೆ ಮಿಶ್ರ ಮಾಡಿ ಒಣಗಿಸಿ ಅದನ್ನು ನೀರು ಕಾಯಿಸಲು, ಅಡುಗೆಗೆ ಇಂಧನವಾಗಿ ಬಳಸುತ್ತಿದ್ದ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.

ಗೋವು ನೀಡುವ ಪ್ರತಿ ಉತ್ಪನ್ನವೂ ಪವಿತ್ರ. ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಹೀಗೆ ಪ್ರತಿಯೊಂದರಲ್ಲೂ ಮಹತ್ವದ ಗುಣಗಳಿವೆ. ಗೋವಿನಿಂದ ಪ್ರತಿಯೊಬ್ಬರೂ ಬಹಳಷ್ಟು ಪ್ರಯೋಜನ ಪಡೆಯುತ್ತಿದ್ದೇವೆ ಎಂದರು.

ಭಾರತೀಯ ಗೋ ತಳಿಯಲ್ಲಿ ಹವಾಮಾನ ಬದಲಾವಣೆ ಪ್ರತಿರೋಧ ಶಕ್ತಿ : ವಿಜ್ಞಾನಿ ಡಾ.ಕೆ.ಪಿ.ರಮೇಶ್

 ಭಾರತೀಯ ಗೋ ತಳಿಗಳಿಗೆ ಹವಾಮಾನ ಬದಲಾವಣೆ ಪರಿಣಾಮವನ್ನು ಎದುರಿಸುವ ಶಕ್ತಿ ಇದ್ದು, ಇದು ವಿಶ್ವದ ವಿಜ್ಞಾನಿಗಳು, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಕಾರಣವಾಗಿದೆ ಎಂದು ಬೆಂಗಳೂರಿನ ವಿಜ್ಞಾನಿ ಡಾ.ಕೆ.ಪಿ.ರಮೇಶ್ ಅಭಿಪ್ರಾಯಪಟ್ಟರು.

ಮಂಗಲ ಗೋಯಾತ್ರೆ ಮಹಾಮಂಗಲ ಅಂಗವಾಗಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಬಾರತೀಯ ಗೋತಳಿಗಳ ಬಗ್ಗೆ ಪ್ರಬಂಧ ಮಂಡಿಸಿದರು.

ಇಡೀ ವಿಶ್ವ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಫಾದನೆ ಹೆಚ್ಚಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ ಗುಣಮಟ್ಟದ ಆಹಾರ ಉತ್ಪಾದನೆಗೆ ಗೋ ಆಧರಿತ ಕೃಷಿ ವ್ಯವಸ್ಥೆ ಅನಿವಾರ್ಯ ಎಂದು ಹೇಳಿದರು. ವಿಶ್ವದ ಗೋತಳಿಗಳಲ್ಲಿ ಶೇಕಡ 12ರಷ್ಟು ಬಾರತದಲ್ಲಿದ್ದು, ಇವುಗಳ ಉತ್ಪನ್ಗಗಳು ಮಣ್ಣಿನ ಪಲವತ್ತತೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಗುಣಮಟ್ಟದ ಕೃಷಿ ಉತ್ಪನ್ನಗಳಿಗೆ ಸಾವಯವ ಗೊಬ್ಬರಗಳು ಅನಿವಾರ್ಯ ಎಂದು ಹೇಳಿದರು.

ಬಾರತದಲ್ಲಿ ಇಂದು 40 ದೇಸಿ ಗೋ ತಳಿಗಳು ಉಳಿದುಕೊಂಡಿವೆ. ಈ ಪೈಕಿ ನಾಲ್ಕು ಅಧಿಕ ಹಾಲು ನೀಡುವ ತಳಿಗಳು. 10 ಅವಳಿ ಉದ್ದೇಶದ ತಳಿಗಳು ಹಾಗೂ ಅಧಿಕ ಶ್ರಮ ವಹಿಸುವ 26 ತಳಿಗಳಿವೆ ಎಂದು ಹೇಳಿದರು. ದೇಶದಲ್ಲಿ ಶೇಕಡ 89ರಷ್ಟು ಹಸುಗಳನ್ನು ೂರಹಿತರು ಹಾಗೂ ಸಣ ರೈತರು ಹೊಂದಿದ್ದಾರೆ. ದೇಶದಲ್ಲಿ ಕಳೆದ ದಶಕದಲ್ಲಿ ಶೇಕಡ 91ರಷ್ಟು ಇದ್ದ ದೇಸಿ ಹಸುಗಳ ಸಂಖ್ಯೆ ಇದೀಗ ಶೇಕಡ 78ಕ್ಕೆ ಇಳಿದಿದೆ. ಕರ್ನಾಟಕ ಒಟ್ಟು ಹಸುಗಳ ಸಂಖ್ಯೆಯಲ್ಲಿ ದೇಶದಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದರೆ ಉತ್ಪಾದನೆಯಲ್ಲಿ 11 ಹಾಗೂ ಉತ್ಪಾದಕತೆಯಲ್ಲಿ 14ನೇ ಸ್ಥಾನದಲ್ಲಿದೆ ಎಂದು ಅಂಕಿ ಅಂಶ ವಿವರಿಸಿದರು.

ರಾಜ್ಯದಲ್ಲಿರುವ ಅಮೃತ್ ಮಹಲ್ ತಳಿ ಅತ್ಯಂತ ವಿಶಿಷ್ಟ ಹಾಗೂ ಬಲಶಾಲಿ ತಳಿಯಾಗಿದ್ದು, ಎರಡನೇ ಮಹಾಯುದ್ಧದಲ್ಲಿ ಇದನ್ನು ಅಪ್ಘಾನಿಸ್ತಾನದಲ್ಲಿ ಯುದ್ಧಕ್ಕೂ ಬಳಸಿಕೊಳ್ಳಲಾಗಿತ್ತು. ಈ ತಳಿಯ ಅಭಿವೃದ್ಧಿಗಾಗಿಯೇ ಮೈಸೂರು ಮಹಾರಾಜರು ರಾಜ್ಯದಲ್ಲಿ 2.77 ಲಕ್ಷ ಎಕರೆ ೂಮಿಯನ್ನು ನಿಗದಿಪಡಿಸಿದರು. ರಾಜ್ಯದಲ್ಲಿ ಈಗಲೂ 9 ಅಮೃತ ಮಹಲ್ ಕಾವಲ್‌ಗಳಿವೆ ಎಂದು ವಿವರಿಸಿದರು.

ಬಾರತೀಯ ಗೋತಳಿಗಳ ರೋಗ ನಿರೋಧಕ ಶಕ್ತಿ ಅಧಿಕ ಹಾಗೂ ಇದರ ಗೊರಸುಗಳು ಗಟ್ಟಿಯಾಗಿದ್ದ ಬರದಂಥ ಪರಿಸ್ಥಿತಿ ತಡೆದುಕೊಳ್ಳುವ ಸಾಮರ್ಥ್ಯವೂ ಇವುಗಳಿಗಿವೆ. ಬಾರತೀಯ ಗೋ ತಳಿಗಳ ಹಾಲಿನಲ್ಲಿ ವಿಟಮಿನ್ ಎ ಹಾಗೂ ಡಿ ಅಧಿಕವಾಗಿದ್ದು, ಇದು ಆರೋಗ್ಯವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಎ-1 ಹಾಲು ಮಕ್ಕಳಿಗೆ ನೀಡಲು ಯೋಗ್ಯವಲ್ಲ. ದೇಸಿ ಹಸುವಿನ ಹಾಲಿನ ಪ್ರಮಾಣ ಕಡಿಮೆಯಾದರೂ, ಗುಣಮಟ್ಟ ಅತ್ಯಧಿಕ. ಇದರಲ್ಲಿ ರೋಗನಿರೋಧಕ ಶಕ್ತಿ ಮತ್ತು ಲ್ಯಾಕ್ಟೊಫಿರಿನ್ ಅಂಶಗಳೂ ಅಧಿಕ ಎಂದರು. ಮಲೆನಾಡು ಗಿಡ್ಡ ತಳಿಯ ಹಾಲಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರೊಟೀನ್‌ಗಳು ಇರುವುದು ಪತ್ತೆಯಾಗಿದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ಬಹಿರಂಗಪಡಿಸಿದರು.

ಬೆಳೆ ಬದಲಾವಣೆ ಕೂಡಾ ದೇಸಿ ಹಸುಗಳಿಗೆ ಮಾರಕವಾಗಿ ಪರಿಗಣಿಸುತ್ತಿದೆ ಎಂದ ಅವರು, ಕೃಷ್ಣವ್ಯಾಲಿ ತಳಿ ಇದಕ್ಕೆ ಉತ್ತಮ ಉದಾಹರಣೆ ಎಂದರು. ಹತ್ತಿ ಬೆಳೆ ಬೆಳೆಯುತ್ತಿದ್ದ ಕಪ್ಪುಮಣ್ಣಿನ ಪ್ರದೇಶದಲ್ಲಿ ಇದೀಗ ಟೊಮ್ಯಾಟೊ ಬೆಳೆ ಆರಂಭಿಸಿರುವುದು ಮಾರಕವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಈ ತಳಿ ವಿನಾಶದ ಅಂಚಿನಲ್ಲಿದೆ ಎಂದು ಹೇಳಿದರು.

ಪಂಚಗವ್ಯ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಅಮರ್‌ನಾಥ್ ಅವರು ಅನುವ ಹಂಚಿಕೊಂಡರು.

ರಾಸಾಯನಿಕ ತಂತ್ರಜಾನದಿಂದಾಗಿ ಮನುಶ್ಯ ಪ್ರಕ್ರತಿ ನಾಶದತ್ತ ಮುಖಮಾಡಿದೆ : ಡಾ.ವಡಿವೇಲು

ಮನುಷ್ಯನ ಸಮಸ್ಯೆಗಳಿಗೆ ಭಾರತೀಯ ಜ್ಞಾನ ಪರಂಪರೆಯಲ್ಲಿ ಉತ್ತರವಿತ್ತು. ಪೂರ್ವಜರನ್ನು ಅನುಸರಿಸುತ್ತಿದ್ದರು.ಆದರೆ ರಾಸಾಯನಿಕ ತಂತ್ರಜಾನದಿಂದಾಗಿ ಮನುಶ್ಯ ಪ್ರಕ್ರತಿ ನಾಶದತ್ತ ಮುಖಮಾಡಿತು ಎಂದು ಕೊಯಂಬುತ್ತೂರಿನ ಅಗ್ರಿ ಸಿಸ್ಟಮ್ ಫೌಂಡೇಶನ್ ಅಧ್ಯಕ್ಷ ಡಾ.ವಡಿವೇಲು ಹೇಳಿದರು.

ಕೂಳೂರಿನ ಮಂಗಲಭೂಮಿಯಲ್ಲಿ ದೇಶಿ ಗೋ ಆಧಾರಿತ ಕೃಷಿ, ಸಾವಯವ ಕೃಷಿಯಲ್ಲಿ ಪಂಚಗವ್ಯದ ಪಾತ್ರ ಹಾಗು ಆಹಾರ ಕೃಷಿ ಪದಾರ್ಥಗಳ ಗುಣಮಟ್ಟ ಹೆಚ್ಚಿಸುವಲ್ಲಿ ಪಂಚಗವ್ಯದ ಪಾತ್ರದ ವಿಚಾರವಾಗಿ ಮಾತನಾಡಿದರು.

ಗೋಮೂತ್ರ,ಸೆಗಣಿ,ಹಾಲು,ಮೊಸರು ಮತ್ತು ತುಪ್ಪವನ್ನು ಸೇರಿಸಿ ಉತ್ಪಾದನೆಯಾಗುವ ಪಂಚಗವ್ಯದ ಉಪಯೋಗದಿಂದ ಬೆಳೆಯ ಬೆಳವಣಿಗೆ ಜಾಸ್ತಿಯಾಗುತ್ತದೆ ಎಂದವರು ವಿವರಿಸಿದರು.

ಪಂಚಗವ್ಯದಲ್ಲಿ ಐಎಯು,ಜಿಎ,ಅರೋಮ್ಯಾಟಿಕ್ ಫಿನಿಯಾಲ್ ಅಸಿಟಿಕ್ ಆಸಿಡ್,ಬೆಂಝೋಲಿಕ್ ಆಸಿಡ್ಗಳು ಇರುವ ಕಾರಣ ಬೆಳೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ.ಇದರ ಪ್ರಯೋಗಕೂಡ ಮಾಡಲಾಗಿದೆ ಎಂದವರು ಹೇಳಿದರು.

ಗುರುಪುರ ಚರ್ಚ್ ಫಾದರ್ ಅಂತೋನಿ ಲೋಬೊ ವಿಚಾರಸಂಕಿರಣದ ಮಧ್ಯೆ ಸಭಾಂಗಣಕ್ಕೆ ಆಗಮಿಸಿದ್ದು ,ಶುಭಸಂದೇಶ ನೀಡಿದರು.

‘ನಾವೆಲ್ಲ ಭಾರತೀಯರು. ದನ ನೀಡುವ ಹಾಲಿಗೆ ಯಾವುದೇ ಭೇದವಿಲ್ಲ.ತಾಯಿ ಮತ್ತು ದನದ ಹಾಲು ಸರ್ವಶ್ರೇಷ್ಟ. ದನ ಸಾಕಿದ ಯಾವುದೇ ವ್ಯಕ್ತಿ ಬಡವನಾಗಿರಲು ಸಾಧ್ಯವಿಲ್ಲ.ಮಾನವನಿಗೆ, ಭೂಮಿಗೆ ದಾನದಿಂದ ವೊಳ್ಳೆಯದಾಗಿದೆ.ದನ-್ಪ್ರೀತಿಸೋಣ ಈ ಸಮ್ಮೇಳನ ಯಶಸ್ವಿಯಾಗಲಿ. ನಾವೆಲ್ಲರೂ ಗೋಹತ್ಯೆ ನಿಶೇಧಕ್ಕೆ ಆಗ್ರಹಿಸೋಣ’

ವಿಚಾರವಿನಿಮಯ ಡಾ.ರೆಡ್ಡಿ,ಡಾ., ಜಯರಾಮ ಭಟ್, ರಘುನಾಥ ರೆಡ್ಡಿ, ಜೆ.ಸ್ವಾಮಿ ಅವರಿಂದ ಸಾವಯವ ಕೃಷಿ ಕುರಿತು ವಿಚಾರ ವಿನಿಮಯ ನಡೆಯಿತು.

ಶಿವ ಸುಬ್ರಹ್ಮಣ್ಯ ಪೆಲತ್ತಡ್ಕ ಸಂವಾದ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News