×
Ad

ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

Update: 2017-01-28 22:17 IST

ಕಾಪು, ಜ.28: ಶಂಕರಪುರದ ಬಾಡಿಗೆ ಮನೆಯಲ್ಲಿ ವಾಸ ಮಾಡಿ ಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಗುಂಜಾವತಿ ನಿವಾಸಿ ಸಗ್ಗು ಬಾಬು ಲಾಂಬೋರೆ ಎಂಬವರ ಮಗ ಬಾಪು ಸಗ್ಗು ಲಾಂಬೋರೆ(21) ಎಂಬವರು ಜ.16ರಂದು ಬೆಳಿಗ್ಗೆ ಊರಿಗೆ ಹೋಗುವು ದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ:ನೂಜಾಡಿ ಗ್ರಾಮದ ಹೊಟ್ಲಬೈಲುವಿನ ಮುತ್ತು ಪೂಜಾರ್ತಿ ಎಂಬವರ ಮಗಳು ಹೇಮ ಯಾನೆ ಹೇಮಾವತಿ(25) ಎಂಬವರು ಜ.26 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಚೀಲದಲ್ಲಿ ಬಟ್ಟೆ ಬರೆಯನ್ನು ತುಂಬಿಸಿ ಕೊಂಡು ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News