×
Ad

ಮುಲ್ಕಿ: ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-2017ರ ಸಮಾರೋಪ

Update: 2017-01-28 22:35 IST

ಮುಲ್ಕಿ, ಜ.28: ಮೂಡನಂಬಿಕೆಗಳನ್ನು ಹೋಗಲಾಡಿಸಿ ಸ್ವಸ್ಥ, ಸಧೃಡ ಸಮಾಜ ನಿರ್ಮಾಣಕ್ಕೆ ವಿಜ್ಞಾನ ಅಧ್ಯಾಪಕರು ಶ್ರಮವಹಿಸಬೇಕು ಎಂದು ಹಿರಿಯ ಸಾಹಿತಿ, ನಾಡೋಜ ಡಾ. ಸಾರ ಅಬೂಬಕರ್ ಹೇಳಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಪ್ನಾದೇಶ್‌ಗಳ ಸಹಯೋಗದೊಂದಿಗೆ ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದ ಮಾಜಿ ಶಾಸಕ ದಿ. ಸೋಮಪ್ಪ ಸುವರ್ಣ ವೇದಿಕೆಯಲ್ಲಿ ಶನಿವಾರ ನಡೆದ ‘ಶಿಕ್ಷಣ ಶಿಲ್ಪಿ’ ಮಾಸಪತ್ರಿಕೆಯ ನಾಲ್ಕನೆ ವರ್ಷಾಚರಣೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-2017ರ ಸಮಾರೋಪ ಸಮಾರಂಭದಲ್ಲಿ ಮಾಡುತ್ತಿದ್ದರು.

ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಗುಣಮಟ್ಟ ಕಳೆದು ಕೊಂಡು ಹೀನಾಯ ಸ್ಥಿತಿಗೆ ತಲುಪಿದೆ. ಶಿಕ್ಷಕರು ಇಚ್ಚಾಶಕ್ತಿ ಪ್ರದರ್ಶಿಸಿದರೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಯುವ ಸಮುದಾಯವನ್ನು ರೂಪಿಸಬಹುದು ಎಂದು ಅಭಿಪ್ರಾಯಿಸಿದರು.

ಆಧುನಿ ತಂತ್ರಜ್ಞಾನದ ಈ ಕಾಲದಲ್ಲಿಯೂ ಸಣ್ಣ ಮಕ್ಕಳನ್ನು ಮೂಡನಂಬಿಕೆಗಳಿಗೆ ಬಳಸುತ್ತಿರುವುದು ಅಘಾತಕಾರಿ ಸಂಗತಿ ಎಂದ ಸಾರ ಅಬೂಬಕರ್, ವಿಜ್ಞಾನ ಅಧ್ಯಾಪಕರು ಮೃದು ಮನಸ್ಸಿನಲ್ಲಿ ಮೂಡಬಹುದಾದ ಮೂಡನಂಬಿಕೆಗಳನ್ನು ಹೋಗಲಾಡಿಸಿ ಮೂಡನಂಬಿಕೆ ರಹಿತ ಸಧೃಡ ಸಮಾಜ ನಿಮಾಣಕ್ಕೆ ಪಣತೊಡಬೇಕು ಎಂದರು.

ದೇಶದಲ್ಲಿ ಶಿಕ್ಷಣದ ಜೊತೆ ಜೊತೆಗೆ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡುವಂತಾಗಬೇಕು. ಇದರಿಂದ ದೇಶ ಸಧೃಡವಾಗಲು ಸಾಧ್ಯ ಎಂದರು.

ಕೆ.ಜಿ.ವಿಎಸ್‌ನ ರಾಜ್ಯ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಪ್ನಾದೇಶ್‌ಗಳ ಸಹಯೋಗದೊಂದಿಗೆ ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದ ಮಾಜಿ ಶಾಸಕ ದವಂಗತ ಸೋಮಪ್ಪ ಸುವರ್ಣ ವೇದಿಕೆಯಲ್ಲಿ ಶುಕ್ರವಾರ ನಡೆದ ‘ಶಿಕ್ಷಣ ಶಿಲ್ಪಿ’ ಮಾಸಪತ್ರಿಕೆಯ ನಾಲ್ಕನೆ ವರ್ಷಾಚರಣೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-2017ಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

 ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಖ್ಯಾತ ಮನೋವೈದ್ಯ ಹಾಗೂ ಕೆ.ಜೆ.ವಿ.ಎಸ್‌ನ ರಾಜ್ಯಾಧ್ಯಕ್ಷ ಡಾ. ಸಿ.ಆರ್. ಚಂದ್ರಶೇಖರ್, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರಗಳೇ ಮಣೆಹಾಕುತ್ತಿರುವ ಈ ಸಮಯದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-2017ರ ಈ ಸಮ್ಮೇಳನದಲ್ಲಿ ತೆಗೆದು ಕೊಂಡಿರುವ ನಿರ್ಣಯಗಳನ್ನು ಸರಕಾರಕ್ಕೆ ನೀಡಲಾಗುವುದು. ಆದರೆ, ನಿಲುವುಗಳ ಬಗ್ಗೆ ಸರಕಾರ ಗಮನಹರಿಸುವ ಭರವಸೆ ಇಲ್ಲ ಎಂದು ಎಂದು ನುಡಿದರು.

ರಾಜ್ಯದ ಎಲ್ಲಾ ಪಕ್ಷಗಳು ಕಾರ್ಪೊರೇಟ್ ಕಂಪೆನಿಗಳು ಸೇರಿದಂತೆ ವಿದ್ಯಾ ಸಂಸ್ಥೆಗಳಿಗೆ ಒತ್ತುನೀಡುತ್ತಿವೆ. ಸರಕಾರಿಶಾಲೆಗಳ ಬಗ್ಗೆ ಸರಕಾರಗಳು ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಚಂದ್ರ ಶೇಖರ್, ಶಿಕ್ಷಕರು ಆಶಾವಾಧಿಗಳಾಗಿ ತಮ್ಮ ತಮ್ಮ ಶಾಲೆಗಳ ಸಬಲೀಕರಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ, ನಾಡೋಜ ಡಾ. ಸಾರ ಅಬೂಬಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಮಟ್ಟದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-2017ಕ್ಕೆ ಬೆನ್ನೆಲುಬಾಗಿ ಅವಿರತ ಶ್ರಮಿಸಿದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ವಸಂತ್ ಬೆರ್ನಾರ್ಡ್, ಮುಲ್ಕಿ ಸಮದಾಯ ಆರೋಗ್ಯ ಕೇಂದ್ರ ಹಿರಿಯ ಸಹಾಯಕಿ ಕುಶಲಾ, ಕೆ.ಜೆ.ವಿ.ಎಸ್‌ನ ಸದಸ್ಯ ಹಾಗೂ ಸ್ಥಳೀಯ ಶಾಲೆಯ ಪ್ರಾಧ್ಯಾಪಕ ಮತ್ತು ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿಯನ್ನು ಇದೆ ವೇಳೆ ಸನ್ಮಾನಿಸಲಾಯಿತು. ಸಮಾಜ ಸೇವಕಿ ಆಬಿದಾ ಬೇಗಂ ಮಾತನಾಡಿದರು.

ಸಮಾರಂಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರೊ.ಶಂಕರ್ ಗೌಡ ಸಾತ್ಕಾರ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಕ್, ಸ್ವಾಗತ ಸಮಿತಿಯ ಅಧ್ಯಕ್ಷೆ ನಂದಾ ಪಾಯಸ್, ಸಮಿತಿಯ ಕಾರ್ಯಾಧ್ಯಕ್ಷ ವಸಂತ್ ಬೆರ್ನಾರ್ಡ್, ಕೆ.ಜೆ.ವಿ.ಎಸ್‌ನ ಅಧ್ಯಕ್ಷ ಶಂಕರ ಗೌಡ, ವಿದ್ಯಾಭಟ್, ಜ್ಯೋತಿ ರಾಮಚಂದ್ರ, ಧನರಾಜ್ ಕೋಟ್ಯಾನ್ ಸಸಿಹಿತ್ಲು, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ, ಸದಸ್ಯರಾದ ಅಬ್ದುಲ್ ಖಾದರ್ ಇಂದಿರಾನಗರ, ಅಬ್ದುಲ್ ಅಝೀಝ್ ಬೊಳ್ಳೂರು, ಅಬ್ದುಲ್ ಹಮೀದ್ ಸಾಗ್ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷೆ ನಂದಾ ಪಾಯಸ್ ಸ್ವಾಗತಿಸಿದರು, ಪತ್ರಕರ್ತ ನರೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್ ಮಾಡಿ..

ಸಾಹೇಬ್ರ ಪುಸ್ತಕ ಮಾರಾಟ ಮಾಡುತ್ತಿಲ್ಲ:

ಕೆಲವೊಂದು ಸಮ್ಮೇಳನಗಳಲ್ಲಿ ನನ್ನ ಪುಸ್ತಕಗಳೂ ಸೇರಿ ಸಾಹೇಬ್ರ ಪುಸ್ತಕಗಳನ್ನು ಮಾರಾಟ ಮಾಡಲು ಕೇಳುತ್ತಿಲ್ಲ. ಮಾರಾಡ ಮಾಡದಿರುವ ಬಗ್ಗೆ ಸ್ಪಷ್ಟ ಕಾರಣಗಳೂ ತಿಳಿದಿಲ್ಲ ಎಂದು ಆರೋಪಿಸಿದ ನಾಡೋಜ ಸಾರ ಅಬೂಬಕರ್, ಉಜಿರೆಯಲ್ಲಿ ನಡೆಯುತ್ತಿರುವ ದ.ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿಲ್ಲ. ಅಲ್ಲಿ ಮಹಿಳೆಯರು ಪರದಾಡುವಂತಾಗಿದೆ. ಒಟ್ಟಾರೆಯಾಗಿ ಸಮ್ಮೇಳನದಲ್ಲಿ ವ್ಯವಸ್ಥೆಗಳು ಸರಿ ಇಲ್ಲ ಎಂದು ಸಾರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಬಾಕ್ಸ್ ಮಾಡಿ.

ಬೆಂಗಳೂರಿನಲ್ಲಿ 2018ರ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ:

ಮುಂದಿನ 2018ರ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮವು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕೆ.ಜಿ.ವಿಎಸ್‌ನ ಅಧ್ಯಕ್ಷ ಮಂಜುನಾಥ ಗೌಡ ಘೋಶಿಸಿದರು. ಬಳಿಕ ಸಮ್ಮಿಲನದ ಸಮ್ಮತಿ ಪ್ರತಿಯನ್ನು ಬೆಂಗಳೂರಿನ ಕೆ.ಜಿ.ವಿಎಸ್ ಪ್ರತಿನಿಧಿಗಳಿಗೆ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ವಸಂತ್ ಬೆರ್ನಾರ್ಡ್ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News