×
Ad

ರಿಕ್ಷಾ ಚಾಲಕನಿಗೆ ಚೂರಿಯಿಂದ ಇರಿದು ಕೊಲೆ

Update: 2017-01-29 13:17 IST

ಉಡುಪಿ, ಜ.29: ಕರಾವಳಿ ಬೈಪಾಸ್ ಸಮೀಪದ ಶಾರದಾ ಇಂಟರ್ ನ್ಯಾಷನಲ್ ಹೊಟೇಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ರಾತ್ರಿ ಚಾಲಕರೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ವರಿದಿಯಾಗಿದೆ.

ಮೃತರನ್ನು ನಿಟ್ಟೂರು ಸಮೀಪ ಕೊಡಂಕೋರಿನ ಹನೀಫ್ ಎಂದು ಗುರುತಿಸಲಾಗಿದೆ. ಕರಾವಳಿ ಬೈಪಾಸ್ ಕಡೆಯಿಂದ ತನ್ನ ಮನಗೆ ರಿಕ್ಷಾದಲ್ಲಿ ಹೋಗುತ್ತಿರುವಾಗ ರಸ್ತೆ ಮಧ್ಯೆ ಅಪರಿಚಿತ ವ್ಯಕ್ತಿಗಳೊಂದಿಗೆ ಸೈಡ್ ಕೊಡುವ ವಿಚಾರದಲ್ಲಿ ವಾದ ವಿವಾದ ಉಂಟಾಗಿತ್ತೆನ್ನಲಾಗಿದೆ. ಈ ವೇಳೆ ಅಪರಿಚಿತ ವ್ಯಕ್ತಿಗಳು ಹನೀಫ್ ರನ್ನು ಚೂರಿಯಿಂದ ಇರಿದಿದ್ದಾರೆ. ಸ್ಥಳಕ್ಕೆ ಬಂದ ರಿಕ್ಷಾ ಚಾಲಕ ಶಬ್ಬೀರ್ ಎಂಬವರಿಗೂ ಚೂರಿಯಿಂದ ಇರಿದಿದ್ದಾರೆ.  ಗಂಭೀರ ಗಾಯಗೊಂಡ ಹನೀಫ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕ ಶಬ್ಬೀರ್ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News