ಮಂಗಳ ಗೋಯಾತ್ರೆ ಸಮ್ಮೇಳನದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ!
Update: 2017-01-29 14:41 IST
ಮಂಗಳೂರು, ಜ.29: ಇಲ್ಲಿನ ಕೂಳೂರಿನಲ್ಲಿ ನಡೆಯುತ್ತಿರುವ ಮಹಾಮಂಗಲ ಗೋಯಾತ್ರೆ ಸಮ್ಮೇಳನದ ವೇದಿಕೆ ಬಳಿ ಅನುಮಾನಾಸ್ಪದ ವಸ್ತು ಪತ್ತೆಯಾಗಿ ಆತಂಕದ ವಾತಾವರಣ ಉಂಟಾಯಿತು.
ಕಟ್ಟಿನಲ್ಲಿ ದನದ ಸೆಗಣಿ ಮತ್ತು ಗೋಮೂತ್ರ ಪತ್ತೆಯಾಯಿತು. ಸಾಧು ಸಂತರು ಸೇರಿದಂತೆ ಸಹಸ್ರಾರು ಮಂದಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಒಮ್ಮೆ ಭಯದ ವಾತಾವರಣ ಉಂಟಾಗಿದ್ದರೂ ಬಳಿಕ ಬಾಂಬ್ ನಿಷ್ಕ್ರೀಯ ದಳ ಹಾಗೂ ಪೊಲೀಸರು ಅನುಮಾಸ್ಪದ ಕಟ್ಟನ್ನು ಪರಿಶೀಲಿಸಿ ಗೊಂದಲ ನಿವಾರಿಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಅನುಮಾನಾಸ್ಪದ ಕಟ್ಟೊಂದನ್ನು ವಶಕ್ಕೆ ತೆಗೆದುಕೊಂಡು ಸ್ಥಳದಿಂದ ದೂರಕ್ಕೆ ಕೊಂಡೊಯ್ದು ಪೊಲೀಸರು ಪೇಚಿಗೀಡಾದರು.