ಪ್ರಾದೇಶಿಕ ಭಾಷೆಗಳ ಆಕಾಶವಾಣಿಗೂ ಈಗ ಕುತ್ತು!
Update: 2017-01-29 17:06 IST
ಹೊಸದಿಲ್ಲಿ,ಜ.29: ದಿಲ್ಲಿಯಿಂದ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಆಕಾಶವಾಣಿ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಮಾರ್ಚ್ ಒಂದರಿಂದ ಆಯಾರಾಜ್ಯಗಳ ರಾಜಧಾನಿಯಿಂದಲೇ ಮಲೆಯಾಳಂ, ಅಸ್ಸಾಮೀಸ್, ತಮಿಳ್ ಭಾಷೆಗಳ ವಾರ್ತೆಗಳನ್ನು ಪ್ರಸಾರಿಸಬೇಕೆಂದು ಆದೇಶ ಹೊರಡಿಸಲಾಗಿದೆ.
ಮಲೆಯಾಳಂ ತಿರುವನಂತಪುರಂನಿಂದ, ಅಸ್ಸಾಮೀಸ್ ಗುವಾಹಟಿಯಿಂದ, ಒರಿಯ ಕಟಕ್‌ನಿಂದ, ತಮಿಳು ಚೆನ್ನೈಯಿಂದ ವಾರ್ತಾಕಾರ್ಯಕ್ರಮಗಳನ್ನು ಪ್ರಸಾರಿಸಬೇಕೆಂದು ಪ್ರಸಾರ ಭಾರತಿ ವಾರ್ತಾ ವಿಭಾಗ ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಜಿ.ಕೆ. ಆಚಾರ್ಯ ಆದೇಶ ಹೊರಡಿಸಿದ್ದಾರೆ. ಆಯಾಭಾಷೆಗಳ ವಾರ್ತೆಗಳನ್ನು ಆಯಾ ರಾಜ್ಯ ರಾಜಧಾನಿಗಳಿಗೆ ಹಸ್ತಾಂತರಿಸುವುದು ಪ್ರಸಾರಭಾರತಿಯ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಮಲೆಯಾಳಂ ಮತ್ತು ಇತರ ಮೂರು ಭಾಷೆಗಳನ್ನು ಅಯ್ದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.