ಶೇ.42 ರಷ್ಟು ಅಪಘಾತಗಳಿಗೆ ವೇಗದ ಚಾಲನೆ ಕಾರಣ

Update: 2017-01-29 11:42 GMT

ಹೊಸದಿಲ್ಲಿ,ಜ.29: ಭಾರತದಲ್ಲಿ ಸಂಭವಿಸುವ ವಾಹನ ಅಪಘಾತಗಳಲ್ಲಿ ಮೃತಪಡುವವರಲ್ಲಿ ಅರ್ಧಾಂಶ ಯುವಕರು. ರಸ್ತೆ ಸುರಕ್ಷಾ ವಾರಾಚರಣೆಯ ಪ್ರಯುಕ್ತ ರಾಷ್ಟ್ರೀಯ ಸಾರಿಗೆ ಸಚಿವಾಲಯ ಪ್ರಕಟಿಸಿದ ಅಂಕಿ ಅಂಶದಂತೆ 2015ರಲ್ಲಿ ದೇಶದಲ್ಲಾದ ರಸ್ತೆ ಅಪಘಾತದಲ್ಲಿ ಒಂದೂವರೆ ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 15ರಿಂದ 34 ವರ್ಷವಯೋಮಾನದವರು 80ಸಾವಿರದಷ್ಟುಮಂದಿ ಇದ್ದಾರೆ. ಇವರಲ್ಲಿ 48,420 ಮಂದಿ 15ರಿಂದ 24ವರ್ಷವಯಸ್ಸಿನವರೆಗಿನವರು. ಇವರಲ್ಲಿ ಶೇ.42ರಷ್ಟುಮಂದಿಯ ಸಾವಿಗೆ ವೇಗದ ಚಾಲನೆಯ ಕಾರಣವಾಗಿದೆ ಎಂದು ಅಧ್ಯಯನಗಳಿಂದ ದೃಢಪಟ್ಟಿದೆ. ಭಾರತದಲ್ಲಿಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ವಾಹನ ಅಪಘಾತದಲ್ಲಿ ಮೃತಪಡುವವರಲ್ಲಿ ಹೆಚ್ಚಿನವರು ಯುವಕರಾಗಿದ್ದಾರೆ.

ಜಾಗತಿಕ ಆರೋಗ್ಯ ಸಂಘಟನೆಯ ಲೆಕ್ಕದ ಪ್ರಕಾರ 15-29 ಪ್ರಾಯದವರ ವಿಭಾಗದಲ್ಲಿ ಅತಿಹೆಚ್ಚು ಸಾವು ವಾಹನ ಅಪಘಾತದಿಂದ ಸಂಭವಿಸಿದೆ. ಆತ್ಮಹತ್ಯೆ, ಎಚ್‌ಐವಿ, ಮಾರಕರೋಗ ಇತ್ಯಾದಿಗಳಿಂದ ಮೃತರಾದವರಿಗಿಂತ ಹೆಚ್ಚಿನ ಸಾವು ವಾಹನ ಅಪಘಾತದಿಂದ ಸಂಭವಿಸಿದೆ.

 2015ರಲ್ಲಿ ಐದು ಲಕ್ಷ ವಾಹನ ಅಪಘಾತ ಸಂಭವಿಸಿದ್ದು ಒಂದೂವರೆ ಲಕ್ಷ ಮಂದಿ ಮೃತರಾಗಿದ್ದರು. ನಾಲ್ಕೂವರೆ ಲಕ್ಷ ಮಂದಿ ಗಂಭೀರ ಗಾಯಗೊಂಡಿದ್ದರು. ಭಾರತದಲ್ಲಿ ಪ್ರತಿದಿನ 1374 ರಸ್ತೆ ಅಪಘಾತಗಳು ನಡೆಯುತ್ತಿವೆ. 407 ಮಂದಿ ಸಾಯುತ್ತಾರೆ. 2015ರಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ವಾಹನಅಪಘಾತಗಳು ಸಂಭವಿಸಿದ್ದು ತಮಿಳುನಾಡಿನಲ್ಲಿ 69,059, ಮಹಾರಾಷ್ಟ್ರದಲ್ಲಿ 63,805, ಮಧ್ಯಪ್ರದೇಶದಲ್ಲಿ 54,947, ಕರ್ನಾಟಕದಲ್ಲಿ 44,011, ಕೇರಳದಲ್ಲಿ 39,014 ಅಪಘಾತಗಳಾಗಿದ್ದು ದೇಶದಲ್ಲಿ ಈ ರಾಜ್ಯಗಳು ಅಪಘಾತದಲ್ಲಿ ಮುಂಚೂಣಿಯಲ್ಲಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News