ಶಾಲೆಯ ಮಾನವುಳಿಸಲು 6ನೆ ಕ್ಲಾಸು ವಿದ್ಯಾರ್ಥಿನಿಗೆ ಗರ್ಭಪಾತ ಮಾತ್ರೆ: ವಿದ್ಯಾರ್ಥಿನಿ ಗಂಭೀರ

Update: 2017-01-29 11:47 GMT

ರಾಂಚಿ,ಜ.29: ಶಾಲೆಯ ಮಾನವುಳಿಸಲಿಕ್ಕಾಗಿ ಆರನೆ ಕ್ಲಾಸಿನ ವಿದ್ಯಾರ್ಥಿನಿಗೆ ಗರ್ಭಪಾತದ ಮಾತ್ರೆ ನೀಡಿದ ಘಟನೆ ನಡೆದಿದೆ. ವೈದ್ಯರ ಸಹಾಯವಿಲ್ಲದೆ ಅವೈಜ್ಞಾನಿಕ ರೀತಿಯಲ್ಲಿ ಗರ್ಭಪಾತಕ್ಕೆ ಯತ್ನಿಸಿದ್ದರಿಂದ ಬಾಲಕಿಯ ಆರೋಗ್ಯ ತೀರಾ ಹದಗೆಟ್ಟಿದೆ. ಜಾರ್ಖಂಡ್‌ನ ಗರ್ವಾಜಿಲ್ಲೆಯ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿರುವ ಬಾಲಕಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯೊಂದು ತಿಳಿಸಿದೆ.

 ಕಸ್ತೂರ್‌ಭಾ ಗಾಂಧಿ ಬಾಲಕಿಯರ ವಿದ್ಯಾಲಯದ ಆರನೆ ಕ್ಲಾಸಿನ ಶಾಲೆಯ ಅಧಿಕಾರಿಗಳು ಗರ್ಭಪಾತದ ಮಾತ್ರೆ ನೀಡಿದ್ದರು. ಶಾಲೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಭಯಪಟ್ಟು ಅಧಿಕಾರಿಗಳು ಈ ರೀತಿ ಮಾಡಿದ್ದರು. ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾತ್ರೆ ಕೊಟ್ಟ ಬಳಿಕ ವಿದ್ಯಾರ್ಥಿನಿಗೆ ರಕ್ತಸ್ರಾವವಾಗಿದ್ದು ನಿಂತಿರಲಿಲ್ಲ. ಆಸ್ಪತ್ರೆಯಲ್ಲಿ ರಕ್ತ ನೀಡಲಾಗಿದ್ದು ವೈದ್ಯರು ಆರೋಗ್ಯ ಸುಧಾರಿಸಬಹುದೆಂದು ತಿಳಿಸಿದ್ದಾರೆ. ಆದರೆ ಜಿಲ್ಲಾಡಳಿತ ಘಟನೆಯನ್ನು ನಿರ್ಲಕ್ಷಿಸಿದ್ದು. ಬಾಲಕಿ ಮನೆಯವರು ದೂರು ನೀಡಿದರೆ ಕೇಸು ದಾಖಲಿಸಲಾಗುವುದು ಎಂದು ಹೇಳುತ್ತಿದೆ. ಘಟನೆ ನಡೆದು ಎರಡು ದಿನದ ಬಳಿಕ ಬಾಲಕಿಯ ಮನೆಯವರಿಗೆ ವಸತಿ ಶಾಲೆಯವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News