‘ಲಹರಿ ಮುಕ್ತ ಸಮಾಜ ಆಂದೋಲನ’ಕ್ಕೆ ಚಾಲನೆ
ಮಂಗಳೂರು, ಜ.29: ಸುನ್ನಿ ಸಂದೇಶ ಮಾಸಪತ್ರಿಕೆಯ 15ನೆ ವಾರ್ಷಿಕ ಮಹಾಸಂಭ್ರಮ ಫೆ.18ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಎ.ಎಂ. ನೌಶಾದ್ ಬಾಖವಿ ಭಾಗವಹಿಸಲಿದ್ದಾರೆ.
ಇದರ ಯಶಸ್ವಿಗೆ ಸ್ಟೇಟ್‌ಬ್ಯಾಂಕ್ ಬಳಿ ತೆರೆಯಲಾದ ಸ್ವಾಗತ ಸಮಿತಿ ಕಚೇರಿಯನ್ನು ಸಮಸ್ತ ಕೇಂದ್ರ ಮುಶಾವರ ನೂತನ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿದರು.
ಪ್ರಚಾರ ಪ್ರಯುಕ್ತ ಹಮ್ಮಿಕೊಳ್ಳಲಾದ ಲಹರಿ ಮುಕ್ತ ಸಮಾಜ ಆಂದೋಲನಕ್ಕೆ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಹಾಜಿ ಝಕರಿಯಾ ಮುಝೈನ್ ಜೋಕಟ್ಟೆ ಚಾಲನೆ ನೀಡಿದರು.
ಎ.ಎಚ್. ನೌಶಾದ್ ಹಾಜಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಸಿದ್ಧೀಕ್ ಫೈಝಿ, ಅಬ್ದುಲ್ಲ ಹಾಜಿ ಬೆಳ್ಮ, ಹಸನ್ ಬೆಂಗರೆ, ಎನ್.ಕೆ. ಅಬೂಬಕರ್ ಕುದ್ರೋಳಿ, ಹಸೈನಾರ್ ಮುಸ್ಲಿಯಾರ್ ಜೋಕಟ್ಟೆ, ಇಸಾಕ್ ಫರಂಗಿಪೇಟೆ, ರವೂಫ್ ಜೋಕಟ್ಟೆ, ಜಾವಿದ್ ಸ್ಟಾರ್ ಬ್ಯಾಗ್, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಇಕ್ಬಾಲ್ ಬಾಳಿಲ, ಹುನೈಸ್ ಪೆರಾಜೆ, ಮುಹಮ್ಮದ್ ಸಾದಿಕಲಿ, ಹೈದರ್ ಮೌಲವಿ ಚೊಕ್ಕಬೆಟ್ಟು, ಅಬೂಬಕರ್ ಮೌಲವಿ ಮಿತ್ತಬೈಲ್, ಹಸನ್ ಬೆಂಗರೆ, ಸುಫಿಯಾನ್ ಮಿತ್ತಬೈಲು, ಅಫ್‌ಝಾನ್ ಮಿತ್ತಬೈಲು, ಮುಹಮ್ಮದ್ ಹಾಜಿ ಪೆರುವಾಯಿ, ನಾಸಿರ್ ಕೌಶರಿ ಬೆಂಗರೆ, ಮುಹಮ್ಮದ್ ಹಾಜಿ ಕಣ್ಣೂರು, ಜಲಾಲುದ್ದೀನ್ ಅಲುರಮಿ ಬೆಂಗರೆ, ಮುಹಿಯುದ್ದೀನ್ ಮೌಲವಿ ತೀರ್ಥಹಳ್ಳಿ, ಸಾದಿಕ್ ಜೋಕಟ್ಟೆ, ಎಂ.ಎಸ್. ಸ್ವಾಲಿಹ್ ಮಾರ್ಗದಂಗಡಿ, ಹಸೈನಾರ್ ಮುಸ್ಲಿಯಾರ್ ಆಕರ್ಷಣ್, ಶರೀಫ್ ಮಿತ್ತಬೈಲ್, ಸ್ವಾದಿಕ್ ಕಲಾಯಿ, ಅಬ್ದುರ್ರಹ್ಮಾನ್ ಕಣ್ಣೂರು, ಅಬ್ದುಲ್ ಹಮೀದ್ ಕ್ಯಾಚ್‌ಮನ್, ರಫೀಕ್ ಮೌಲವಿ ಅಜ್ಜಾವರ, ಬಶೀರ್ ಅಝ್‌ಹರಿ ಬಾಯಾರ್, ಫಾರೂಕ್ ಮಂಗಳೂರು, ಸಾಗರ್ ಮುಹಮ್ಮದ್ ಹಾಜಿ, ಖಾಸಿಂ ಹಾಜಿ ಬೆಳ್ಮ, ಇಕ್ಬಾಲ್ ಮೌಲ ವಿ ಮರ್ದಾಲ ಉಪಸ್ಥಿತರಿದ್ದರು.
ಮುಸ್ತಫಾ ಫೈಝಿ ಸ್ವಾಗತಿಸಿದರು. ಸಿದ್ಧೀಕ್ ಫೈಝಿ ಕರಾಯ ವಂದಿಸಿದರು.