ಸಾಯಂಕಾಲ ಬಂಟರಜಪ್ಪಿನಮೊಗರು ಬೆಳ್ಳಿ ಹಬ್ಬ ಸಂಭ್ರಮ
ಮಂಗಳೂರು, ಜ.29: ಸಾಯಂಕಾಲ ಬಂಟರಜಪ್ಪಿನಮೊಗರು ಇದರ ಬೆಳ್ಳಿ ಹಬ್ಬ ಸಂಭ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಇತ್ತೀಚೆಗೆ ನೆರವೇರಿಸಿದರು.
ಬೊಳ್ಯಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಜೆ.ಆರ್. ಲೋಬೋ, ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್, ಆದಾನಿ ಗ್ರೂಪ್ಸ್‌ನ ಕಿಶೋರ್ ಆಳ್ವ, ಸಂಗೀತ ನಿರ್ದೇಶಕ ಗುರುಕಿರಣ್, ಸುರೇಶ್ ಶೆಟ್ಟಿ ಗುರ್ಮೆ, ಕರುಣಾಕರ ಆಳ್ವ, ಕೆ. ಪದ್ಮನಾಭ ಶೆಟ್ಟಿ ಪುಣೆ, ರಮೇಶ್ ಶೆಟ್ಟಿ ಜಪ್ಪು ಗುಡ್ಡೆಗುತ್ತು, ಕುತ್ತಾರುಗುತ್ತು ಕೆ. ಸದಾಶಿವ ಶೆಟ್ಟಿ, ಜೆ. ಸುರೇಂದ್ರ ಹಳೆಮನೆ, ಬದಿಗುಡ್ಡೆ ಉದಯ ಚೌಟ, ಕೇಶವ ಅಂಗಡಿಮಾರ್, ಸಬಿತಾ ಆರ್. ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಬನತಡಿ, ಮಾದವ ನಾಕ್ ಅಡ್ಯಾರ್, ಅಬ್ದುಲ್ ರವೂಫ್ ಪುತ್ತಿಗೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷರು ಕುತ್ತಾರುಗುತ್ತು ಶಶಿಧರ ಶೆಟ್ಟಿ, ನವೀನ್‌ಚಂದ್ರ ರೈ, ಅಧ್ಯಕ್ಷರು ಅನಿಲ್ ಶೆಟ್ಟಿ ಮನ್ಕುತೋಟ, ಸವಿತಾ ಮೊದಲಾದವರು ಉಪಸ್ಥಿತರಿದ್ದರು.