×
Ad

ಮಂಗಳೂರು: ‘ಎವರಿ ಡೇ ಸೂಪರ್ ಮಾರ್ಕೆಟ್’ ಶುಭಾರಂಭ

Update: 2017-01-29 18:55 IST

ಮಂಗಳೂರು, ಜ.29: ನಗರದ ಬೆಂದೂರ್‌ವೆಲ್ ಸರ್ಕಲ್ ಬಳಿಯ ಎಸ್ಸೆಲ್ ವಿಲ್‌ಕೋನ್‌ನಲ್ಲಿ ಮಂಗಳೂರಿನ ಪ್ರಥಮ ಸಾವಯವ ಸೂಪರ್ ಮಾರ್ಕೆಟ್‌ ‘ಎವರಿ ಡೇ ಸೂಪರ್ ಮಾರ್ಕೆಟ್’ ರವಿವಾರ ಶುಭಾರಂಭಗೊಂಡಿತು.

ದಿ ಪೆಟ್ ಬಾರೋ ಪ್ರಾಜೆಕ್ಟ್‌ನ ಮುಖ್ಯಸ್ಥ ಲೆ.ಸಿಡಿಆರ್ ಸಿ.ವಿ. ಪ್ರಕಾಶ್,ಯೆನೆಪೊಯ ಗ್ರೂಪ್‌ನ ಮುಖ್ಯಸ್ಥ ವೈ. ಮುಹಮ್ಮದ್ ಕುಂಞಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ‘ಎವರಿ ಡೇ ಸೂಪರ್ ಮಾರ್ಕೆಟ್’ ಉದ್ಘಾಟಿಸಿದರು.

ದಿ ಪೆಟ್‌ಬಾರೋ ಪ್ರಾಜೆಕ್ಟ್‌ನ ಮುಖ್ಯಸ್ಥ ಲೆ.ಸಿಡಿಆರ್ ಸಿ.ವಿ. ಪ್ರಕಾಶ್ ಮಾತನಾಡಿ , ಭಾರತದಲ್ಲಿ ರಾಸಾಯನಿಕ ಬಳಕೆಯ ವಸ್ತುಗಳನ್ನು ಹೆಚ್ಚು ಉಪಯೋಗಿಸಲಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಅತ್ಯಗತ್ಯವಾಗಿದೆ. ಸಾವಯವ ಉತ್ಪನ್ನಗಳಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಐವರು ಯುವ ಉದ್ಯಮಿಗಳು ಮಂಗಳೂರಿನಲ್ಲಿ ಪ್ರಪ್ರಥಮ ಸಾವಯವ ಉತ್ಪನ್ನಗಳ ಮಳಿಗೆಯನ್ನು ಸ್ಥಾಪಿಸಿರುವುದು ಶ್ಲಾಘನೀಯ ಎಂದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ ,  ವಿಷಪೂರಿತ ಆಹಾರ ಸೇವನೆಯಿಂದ ನಾನಾ ರೋಗಗಳು ಕಾಣಿಸಿಕೊಳ್ಳುತ್ತವೆ. ರೋಗದಿಂದ ಮುಕ್ತಗೊಳ್ಳಲು ಉತ್ತಮವಾದ ಆಹಾರವನ್ನು ಸೇವನೆ ಮಾಡುವ ಅಗತ್ಯವಿದೆ. ಈ ಸೂಪರ್ ಮಾರ್ಕೆಟ್‌ನಲ್ಲಿ ಸಂಸ್ಕರಿಸಲ್ಪಟ್ಟ, ಪರಿಷ್ಕರಿಸಲ್ಪಟ್ಟ ಆಹಾರ ಲಭಿಸುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

 ಈ ಸಂದರ್ಭ ಸಂಸ್ಥೆಯ ಪಾಲುದಾರರಾದ ಕಿರಣ್, ಯೋಗೀಶ್, ಡೇವಿಡ್ ಜೋಸೆಫ್, ಹಾರಿಸ್ ಇಬ್ರಾಹೀಂ, ರಿಯಾಝ್ ಹಾಗು ಪಾಲುದಾರರ ಕುಟುಂಬಸ್ಥರಾದ ಕೆ. ಯಾದವ್, ಎಂ.ಬಿ. ಜಾನ್, ಜೋಸಫ್ ಉಪಸ್ಥಿತರಿದ್ದರು.

‘ಎವರಿ ಡೇ ಸೂಪರ್ ಮಾರ್ಕೆಟ್’ನಲ್ಲಿ ಡ್ರೈ ಫ್ರುಟ್ಸ್, ಸ್ಟೆಶನರಿ, ಎಸ್ಸೆಸರ್ಸಿಸ್, ಕಾಸ್ಮೆಟಿಕ್, ತಾಜಾ ಮೀನು, ಮಾಂಸ, ಮನೆ ಸಾಮಗ್ರಿಗಳು ಹಾಗು ಮಕ್ಕಳ ಆಟಿಕೆಗಳು, ಬೇಕರಿ ಐಟಂಗಳು, ಐಸ್‌ಕ್ರೀಮ್‌ಗಳ ಸಹಿತ ನಾನಾ ವಸ್ತುಗಳು ಲಭಿಸಲಿದೆ. ಅದಲ್ಲದೆ ‘ಬೇಕ್ ಡೇ’ ವಿಭಾಗ ಹಾಗು ‘ಫಾರ್ಮ್ ಬ್ಯಾಗ್’ ಎನ್ನುವ ವಿಶೇಷವಾದ ವಿಭಾಗಗಳಲ್ಲಿ ಗ್ರಾಹಕರಿಗೆ ಬೇಕಾದ ವಸ್ತುಗಳು ದೊರೆಯಲಿದೆ. ಜೊತೆಗೆ ತಾಜಾ ಹಾಗು ಸಾವಯವ ತರಕಾರಿಗಳು ಲಭ್ಯವಿದೆ.

ಉಚಿತ ಹೋಮ್ ಡೆಲಿವರಿ ವ್ಯವಸ್ಥೆ ಸಹಿತ ಸೂಪರ್ ಮಾರ್ಕೆಟ್‌ಗೆ ಆಗಮಿಸುವ ಗ್ರಾಹಕರು ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News