×
Ad

‘ಪ್ರತಿಪಕ್ಷಗಳಿಂದ ಲಂಚ ಪಡೆದು, ಆಪ್‌ಗೆ ಮತ ಹಾಕಿ’ ಹೇಳಿಕೆ : ಕೇಜ್ರಿ ವಿರುದ್ಧ ಎಫ್‌ಐಆರ್‌ಗೆ ಚು.ಆಯೋಗ ಆದೇಶ

Update: 2017-01-29 19:26 IST

ಹೊಸದಿಲ್ಲಿ, ಜ.29: ಗೋವಾ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಲಂಚ ಸ್ವೀಕರಿಸುವಂತೆ ಮತದಾರರಿಗೆ ಕರೆ ನೀಡಿದ್ದಕ್ಕಾಗಿ ಎಎಪಿ ವರಿಷ್ಠ ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚುನಾವಣಾ ಆಯೋಗವು ರವಿವಾರ ಆದೇಶ ನೀಡಿದೆ.

  ಈ ಪ್ರಕರಣಕ್ಕೆ ಸಂಬಂಧಿಸಿ ಕೇಜ್ರಿವಾಲ್ ವಿರುದ್ಧ ಕೈಗೊಳ್ಳಲಾದ ಕಾನೂನು ಕ್ರಮಕ್ಕೆ ಸಂಬಂಧಿಸಿ ಅನುಸರಣಾ ವರದಿಯೊಂದನ್ನು ಈ ತಿಂಗಳ 31ರೊಳಗೆ ಕಳುಹಿಸಿಕೊಡುವಂತೆ ಆಯೋಗವು ಸೂಚನೆ ನೀಡಿದೆ. ಲಂಚದ ಅಮಿಷವೊಡ್ಡುವ ರಾಜಕೀಯ ಪಕ್ಷಗಳಿಂದ ಹಣವನ್ನು ಪಡೆದುಕೊಳ್ಳುವಂತೆಯೂ, ಆದರೆ ಮತವನ್ನು ಮಾತ್ರ ಎಎಪಿಗೆ ನೀಡುವಂತೆ ಕೇಜ್ರಿವಾಲ್ ಜನವರಿ 8ರಂದು ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಮತದಾರರಿಗೆ ಕರೆ ನೀಡಿದ್ದರು. ಎದುರಾಳಿ ಪಕ್ಷಗಳ ಕಾರ್ಯಕರ್ತರು 5 ಸಾವಿರ ರೂ. ಲಂಚದ ಅಮಿಷವೊಡ್ಡಿದಲ್ಲಿ ಅವರಿಗೆ 10 ಸಾವಿರ ರೂ. ಲಂಚದ ಬೇಡಿಕೆಯೊಡ್ಡುವಂತೆ ಹಾಗೂ ಹೊಸ ಕರೆನ್ಸಿ ನೋಟುಗಳನ್ನು ಮಾತ್ರವೇ ಸ್ವೀಕರಿಸುವಂತೆ ಕೇಜ್ರಿವಾಲ್ ಮತದಾರರಿಗೆ ಸೂಚಿಸಿದ್ದರು.

ದಿಲ್ಲಿ ಮುಖ್ಯಮಂತ್ರಿಯ ಹೇಳಿಕೆಗಳು ಲಂಚ ಸ್ವೀಕರಿಸುವುದಕ್ಕೆ ಕುಮ್ಮಕ್ಕು ನೀಡುತ್ತವೆಯೆಂದು ಆಯೋಗ ತಿಳಿಸಿದೆ. ಒಂದು ವೇಳೆ ಅವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದೆ ಇದ್ದಲ್ಲಿ, ತಾನು ಎಎಪಿಯ ಮಾನ್ಯತೆಯನ್ನು ರದ್ದುಪಡಿಸುವುದಾಗಿ ಆಯೋಗ ಎಚ್ಚರಿಕೆ ನೀಡಿದೆ.

   ಇದಕ್ಕೂ ಮೊದಲು ಕಳೆದ ವಾರ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದು, ದಿಲ್ಲಿ ಚುನಾವಣೆಯಲ್ಲಿ ಜನರು ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಹಣ ಪಡೆದುಕೊಂಡರೂ, ಎಎಪಿಗೆ ಮತಹಾಕಿದ್ದರು. ಒಂದು ವೇಳೆ ಚುನಾವಣಾ ಆಯೋಗವು ನನ್ನ ಹೇಳಿಕೆಯನ್ನು ಬಳಸಿಕೊಂಡು, ಅದನ್ನು ಪ್ರಚಾರ ಮಾಡಿದಲ್ಲಿ ಕೇವಲ ಎರಡೇ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ನೋಟುಗಳನ್ನು ವಿತರಿಸುವುದನ್ನು ನಿಲ್ಲಿಸಲಿವೆ’’ ಎಂದು ಕೇಜ್ರಿವಾಲ್ ಪತ್ರದಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News