×
Ad

ಕೋಳಿ ಅಂಕ ಕ್ಕೆ ದಾಳಿ : ನಗದು ಸಹಿತ 6 ಆರೋಪಿಗಳ ಬಂಧನ

Update: 2017-01-29 20:11 IST

ಕಾಸರಗೋಡು , ಜ.29  : ಕೋಳಿ ಅಂಕ ಕ್ಕೆ ದಾಳಿ ನಡೆಸಿದ ಬದಿಯಡ್ಕ ಠಾಣಾ ಪೊಲೀಸರು  ಆರು ಮಂದಿಯನ್ನು  ಬಂಧಿಸಿದ್ದು , ಆರು ಕೋಳಿ , 22 ಸಾವಿರ ರೂ . ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಬಂಬ್ರಾಣದ ಪ್ರಸಾದ್(30), ಕರಿಕಟ್ಟಪಳ್ಳ ದ ಜಯರಾಮ(49), ಮುಗುವಿನ ಬಾಬು ರೈ (59), ಪೆಲತ್ತಡ್ಕ ದ  ಸದಾನಂದ(54), ಕಿನ್ನಿಮಜಲಿನ ಸುರೇಂದ್ರ(38), ಮುಗುವಿನ ಕುಂಞಿ ಮೂಲ್ಯ(56 ) ಎಂದು ಗುರುತಿಸಲಾಗಿದೆ .

ಬಾಡೂರು ಎಂಬಲ್ಲಿ  ನಡೆಯುತ್ತಿದ್ದ ಕೋಳಿ ಅಂಕಕ್ಕೆ  ದಾಳಿ ನಡೆಸಿ ಈ ಆರೋಪಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News