ಇಲ್ಲಿ ಪಾದಚಾರಿ ರಸ್ತೆಯೇ ಮೂತ್ರಾಲಯ !
ಉಡುಪಿ, ಜ.29: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬೋರ್ಡ್ ಹೈಸ್ಕೂಲ್ನಿಂದ ಕಿದಿಯೂರು ಹೊಟೇಲಿಗೆ ಹೋಗುವ ರಸ್ತೆಯ ಫುಟ್ ಪಾತ್ ಬಯಲು ಮೂತ್ರಾಲಯವಾಗಿ ಮಾರ್ಪಟ್ಟಿದೆ.
ಹೈಸ್ಕೂಲಿನ ಕಂಪೌಂಡಿನ ಪ್ರವೇಶದ್ವಾರದಿಂದ ಹಾದು ಹೋಗಿ, ಸಿಟಿ ಬಸ್ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಫುಟ್‌ಪಾತ್ ಮೇಲೆಯೇ ಜನರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದು ಪರಿಣಾಮ ಈ ಫುಟ್ ಪಾತ್‌ನಲ್ಲಿ ದುರ್ವಾಸನೆ ಹಬ್ಬಿ ನಡೆಯಲು ಅಸಾಧ್ಯವಾಗುತ್ತಿದೆ. ಅಲ್ಲದೆ ನಗರ ಸ್ವಚ್ಚತಾ ಕಾರ್ಮಿಕರು ಗೂಡಿಸಿದ ಕಸವನ್ನು ವಿಲೇವಾರಿ ಗೊಳಿಸಲು ಇಲ್ಲಿಯೇ ಸಂಗ್ರಹಿಸಿ ಇಡಲಾಗುತ್ತಿದೆ. ಈ ಎಲ್ಲ ಪರಿಸ್ಥಿತಿ ಯಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು ಈ ಸ್ಥಳದಲ್ಲಿ ನಡೆದಾಡಲು ಮುಜುಗರ ಪಡುತ್ತಿದ್ದಾರೆ.
ಆದುದರಿಂದ ನಗರಸಭೆಯು ನಗರದ ಸ್ವಚ್ಚತೆಯ ದೃಷ್ಟಿಯಿಂದ ಈ ಪ್ರದೇಶವನ್ನು ಬಯಲು ಮೂತ್ರಾಲಯದಿಂದ ಮುಕ್ತಗೊಳಿಸಬೇಕಾಗಿದೆ. ಇಲ್ಲಿ ಸಾರ್ವಜನಿಕರಿಗೆ ಎಚ್ಚರಿಸುವ ಫಲಕ ಮತ್ತು ಜಾಗೃತಿಸುವ ಘೋಷ ವಾಕ್ಯ ಫಲಕಗಳ ಅಳವಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.