ಕೆ.ವಿ.ಜಿ. ಡೆಂಟಲ್ ಕಾಲೇಜ್‌ಗೆ ರ‍್ಯಾಂಕ್ ಗಳ ಸಿಂಹಪಾಲು
ಸುಳ್ಯ , ಜ.29 : ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯವು ನಡೆಸಿದ 2016ನೇ ವರ್ಷದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು 8 ರ‍್ಯಾಂಕ್ಗಳನ್ನು ಗಳಿಸಿದ್ದಾರೆ. ಪದವಿ ವಿಭಾಗದಲ್ಲಿ 26 ರ‍್ಯಾಂಕ್ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವುದರ ಮೂಲಕ ರ‍್ಯಾಂಕ್ಗಳ ಸಿಂಹಪಾಲು ಕೆ.ವಿ.ಜಿ. ಡೆಂಟಲ್ ಕಾಲೇಜಿಗೆ ಲಭಿಸಿದೆ .
ವಕ್ರದಂತ ವಿಭಾಗ ಮುಖ್ಯಸ್ಥರಾದ ಡಾ.ಶರತ್ ಕುಮಾರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ - ಡಿಪ್ಲೋಮ ವಿಭಾಗದಲ್ಲಿ ಡಾ.ಯಸ್.ವಿ.ಲಕ್ಷ್ಮಿ ಸರ್ವಾನಿ 1 ನೇ ರ‍್ಯಾಂಕ್ ಪಡೆದಿದ್ದು, ಕೇರಳದ ಪಾಲಕ್ಕಾಡ್‌ನವರಾದ ಡಾ.ನಿಶಾ ವಿ. 2ನೇ ರ‍್ಯಾಂಕ್ ಪಡೆದಿದ್ದಾರೆ.
ವಕ್ರದಂತ ಸ್ನಾತಕೋತ್ತರ ವಿಭಾಗದಲ್ಲಿ ಮಂಗಳೂರು ಸುರತ್ಕಲ್‌ನ ಡಾ.ನಿಕಿತಾ 4ನೇ ರ‍್ಯಾಂಕ್ ಹಾಗೂ ಸುಳ್ಯದ ಡಾ.ರೇವಂತ್ ಎಸ್. ಸುಂತೋಡು 8ನೇ ರ‍್ಯಾಂಕ್, ಜಮ್ಮು ಕಾಶ್ಮೀರದ ಡಾ.ಶರತ್ ಖಾರ್ಯಾಲ್ 9ನೇ ರ‍್ಯಾಂಕ್ ಪಡೆದಿದ್ದಾರೆ.
ಬಾಯಿ ರೋಗ ಪತ್ತೆ ಮತ್ತು ಕ್ಷ ಕಿರಣ ವಿಭಾಗ ಮುಖ್ಯಸ್ಥ ಡಾ.ಜಯಪ್ರಸಾದ ಆನೆಕಾರರವರ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶ ಲಕ್ನೋದ ಡಾ.ಸೋನಲ್ ಶ್ರೀವಾತ್ಸವ ಮತ್ತು ಒರಿಸ್ಸಾದ ಡಾ.ಮನಸ್ವಿತಾ ತ್ರಿಪಾಠಿಯವರು ಜಂಟಿಯಾಗಿ 3 ನೇ ರ‍್ಯಾಂಕ್ ಪಡೆದಿದ್ದಾರೆ.
ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ರಾಮರಾಜ್ ಅವರ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶ ಗೌಜಿಯಾ ಬಾದ್‌ನ ಡಾ.ವೈಭವ ಜೈನ್ 10ನೇ ರ‍್ಯಾಂಕ್ ಪಡೆದಿದ್ದಾರೆ.
ದಂತ ವೈದ್ಯಕೀಯ ಪದವಿ ವಿಭಾಗದಲ್ಲಿ ಡಾ.ತುಷಾರ ಕುಮಾರಿ 4ನೇ ರ‍್ಯಾಂಕ್ ಹಾಗೂ ಕೇರಳದ ಡಾ. ಶ್ರೀಲೇಖಾ ರವಿಕುಮಾರ್ 8ನೇ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ ಡಾ.ತುಷಾರ ಕುಮಾರಿ, ಡಾ.ಫಸ್ಮಿಯ ಕೆ., ಡಾ.ಶ್ರೀಲೇಖಾ ರವಿಕುಮಾರ್, ಡಾ.ಅನಘ ಜಯರಾಮ್, ಡಾ.ಅನೀಷಾ ಸಾಯಿ ಕೆ.ಕೆ., ಡಾ.ನಿಮಿಷಾ ವಿ.ಪಿ., ಡಾ ಗಣೇಶ್ ಪ್ರಸಾದ್ ಶೆಟ್ಟಿ ವಿ., ಡಾ. ಮನೋಜ್, ಡಾ. ಜುಮಾನ ಹಸೀನ್ ಪಿ.ಪಿ., ಇವರುಗಳು ವಿವಿಧ ವಿಷಯಗಳಲ್ಲಿ 22 ವಿಷಯವಾರು ರ‍್ಯಾಂಕ್ಗಳನ್ನು ಪಡೆದುಕೊಂಡಿದ್ದಾರೆ.
ಇವರೆಲ್ಲರನ್ನು ಹಾಗೂ ಇದಕ್ಕೆ ಕಾರಣರಾದ ಎಲ್ಲ ಶಿಕ್ಷಕರನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಪ್ರಧಾನ ಕಾರ್ಯದರ್ಶಿ ಡಾ ಕೆ.ವಿ.ರೇಣುಕಾ ಪ್ರಸಾದ್ ಹಾಗೂ ನಿರ್ದೇಶಕಿ ಡಾ. ಜ್ಯೋತಿ ಆರ್. ಪ್ರಸಾದ್, ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ಅಭಿನಂದಿಸಿದ್ದಾರೆ.