‘ಉಪಾಧ್ಯಾಯ ಸಮ್ಮಾನ್’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ
ಉಡುಪಿ, ಜ.29: ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನದ ವತಿ ಯಿಂದ ‘ಉಪಾಧ್ಯಾಯ ಸಮ್ಮಾನ್’ 6ನೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉಡುಪಿ ರಥಬೀದಿ ರಾಘವೇಂದ್ರ ಮಠದ ಮಂತ್ರಾಲಯ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಆಧ್ಯಾತ್ಮಿಕ ವಿದ್ಯೆ ಹಾಗೂ ಕಲೆಯಿಂದಾಗಿ ಸಾಮಾಜಿಕ ಪ್ರಗತಿ ಸಾಧ್ಯ. ಇದರಿಂದ ಜೀವನ ಸುಗಮವಾಗಿ ನಡೆಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ. ಎಸ್.ಮೂರ್ತಿ ಮಾತನಾಡಿದರು.
ಡಾ.ಯು.ಪಿ.ಉಪಾಧ್ಯಾಯ, ಕೆ.ಪಿ.ರಾವ್, ಕುಂಟಾರು ರವೀಶ್ ತಂತ್ರಿ, ಕೆ.ಎಲ್.ಕುಂಡಂತಾಯ, ಡಾ.ಟಿ. ರಂಗ ಪೈ, ವೆಲೆಂಟೈನ್ ಡಿಸೋಜ, ಮಧುಕರ ಶೆಟ್ಟಿ, ಆರ್.ಎಲ್.ಡಯಾಸ್, ಡಾ.ಕಿರಣ್ ಆಚಾರ್ಯ, ಅಬೂ ಬಕರ್ ಪರ್ಕಳ, ವಿಶು ಶೆಟ್ಟಿ, ಡಾ.ಪದ್ಮನಾಭ ಕೇಕುಣ್ಣಾಯ, ಜೈ ವಿಠ್ಠಲ್, ಪ್ರೊ.ಶಂಕರ್, ಜನ್ಸಾಲೆ ರಾಘವೇಂದ್ರ ಆಚಾರ್ಯ, ಜಬ್ಬಾರ್ ಸಮೋ, ಬಸ್ತಿ ಸದಾಶಿವ ಶೆಣೈ, ವಿದುಷಿ ಲಕ್ಷ್ಮಿಗುರುರಾಜ್, ಪ್ರವೀಣಾ ಮೋಹನ್, ಪವನ ಬಾಲಚಂದ್ರ ಆಚಾರ್, ವೀಣಾ ಶ್ರೀನಿವಾಸ್, ಕುದಿ ಶ್ರೀನಿವಾಸ ಭಟ್, ಕಿರಣ್ ಮಂಜನಬೈಲ್, ವಿದ್ಯಾರ್ಥಿ ಲಾರೆನ್ ಪಿಂಟೊ, ಕಿಶನ್ ನಾಯಕ್, ಎಂ.ಜೆ.ಅರ್ಚನಾ ಮೊದಲಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಎಚ್., ಮಂಗಳೂರು ವಿವಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಅಮೃತ್ ಶೆಣೈ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಉಪಾಧ್ಯ, ಉದ್ಯಮಿ ರಂಜನ್ ಕಲ್ಕೂರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ದೇವದಾಸ ಹೆಬ್ಬಾರ್ ಕಟ್ಟಿಂಗೇರಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಉಪಾಧ್ಯಾಯ ಮೂಡುಬೆಳ್ಳೆ ಸ್ವಾಗತಿಸಿದರು. ಆರ್. ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಟಿ. ವಿ. ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.