×
Ad

ನಾನು ಗೆದ್ದರೆ ಮುಸ್ಲಿಮರ ಪ್ರದೇಶಗಳಿಗೆ ಕರ್ಫ್ಯೂ:ಉತ್ತರ ಪ್ರದೇಶದ ಬಿಜೆಪಿ ಶಾಸಕ

Update: 2017-01-30 13:51 IST

 ಶಾಮ್ಲಿ,ಜ.30: ತಾನು ಗೆದ್ದರೆ ಕೈರಾನಾ, ದೇವಬಂದ್‌ಮತ್ತು ಮೊರಾದಾಬಾದ್‌ಗಳಲ್ಲಿ ಕರ್ಫ್ಯೂ ಹೇರುವುದಾಗಿ ಶಾಮ್ಲಿ ಜಿಲ್ಲೆಯ ಥಾನಾ ಭವನ್ ಪ್ರದೇಶದ ಬಿಜೆಪಿ ಶಾಸಕ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮರುಆಯ್ಕೆ ಬಯಸಿ ಕಣಕ್ಕಿಳಿದಿರುವ ಸುರೇಶ ರಾಣಾ ಹೇಳಿದ್ದಾರೆ. ಉತ್ತರ ಪ್ರದೇಶ ಬಿಜೆಪಿಯ ಉಪಾಧ್ಯಕ್ಷರೂ ಆಗಿರುವ ರಾಣಾ 2013ರ ಮುಝಫರ್‌ನಗರ ಕೋಮು ಗಲಭೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.

ರಾಣಾ ಶನಿವಾರ ಥಾನಾ ಭವನ್ ಪ್ರದೇಶದಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆಯನ್ನು ದ್ದೇಶಿಸಿ ಮಾಡಿದ ಭಾಷಣದ ವೀಡಿಯೊ ವೈರಲ್ ಆಗಿದೆ. ‘‘ ಸುರೇಶ ರಾಣಾ ಚುನಾವಣೆಯನ್ನು ಮತ್ತೊಮ್ಮೆ ಗೆದ್ದರೆ ಕೈರಾನಾ,ದೇವಬಂದ್ ಮತ್ತು ಮೊರಾದಾಬಾದ್ ಗಳಲ್ಲಿ ಕರ್ಫ್ಯೂ ಹೇರಲಾಗುವುದು. ಮಾ.11ರಂದು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯೊಂದಿಗೆ ಶಾಮ್ಲಿಯಿಂದ ಥಾನಾ ಭವನ್‌ವರೆಗೆ ಮೆರವಣಿಗೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ತಾನು ಯಾವುದೇ ವಿವಾದಾತ್ಮಕ ಹೇಳಿಕೆಯನ್ನು ನೀಡಿಲ್ಲ. ಯಾವುದೇ ಧರ್ಮದ ವಿರುದ್ಧ ಹೇಳಿಕೆಯನ್ನು ನೀಡಿಲ್ಲ. ತಾನು ಗೆದ್ದರೆ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೈರಾನಾ, ದೇವಬಂದ್, ಮೊರಾದಾಬಾದ್ ಮತ್ತು ಇತರ ಪ್ರದೇಶಗಳಿಂದ ಇತರರು ವಲಸೆ ಹೋಗುವಂತೆ ಬಲಾತ್ಕರಿಸಿದ್ದ ಗೂಂಡಾಗಳು ಇಲ್ಲಿಂದ ವಲಸೆ ಹೋಗಬೇಕಾಗುತ್ತದೆ ಎಂದಷ್ಟೇ ತಾನು ಹೇಳಿದ್ದೇನೆ ಎಂದು ರಾಣಾ ಉತ್ತರಿಸಿದ್ದಾರೆ. ಗೂಂಡಾಗಳ ಭಯ ಮತ್ತು ದೌರ್ಜನ್ಯಗಳಿಂದಾಗಿ ಈ ಪ್ರದೇಶದಲ್ಲಿಯ ಭಾರೀ ಸಂಖ್ಯೆಯ ಜನರು ವಲಸೆ ಹೋಗಿದ್ದಾರೆ ಎಂದರು.

 ಉ.ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ಫ.11ರಂದು ನಡೆಯಲಿದ್ದು, ಥಾನಾ ಭವನದ ಮತದಾರರು ಅಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮಾ.11ರಂದು ಫಲಿತಾಂಶ ಪ್ರಕಟಗೊಳ್ಳಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News