×
Ad

ಕಲಾವಿದರಿಗೆ ವಿನೂತನ ಪ್ರೋತ್ಸಾಹ !

Update: 2017-01-30 14:44 IST

ಭೋಪಾಲ್, ಜ.30: ಚಿತ್ರ ನಿರ್ಮಾಪಕ ಸಂಜಯ್‌ ಲೀಲಾ ಬನ್ಸಾಲಿಗೆ ಶೂನಿಂದ  ಹೊಡೆಯುವವರಿಗೆ ಪ್ರತಿ  ಏಟಿಗೆ  10,000 ರೂ ನೀಡುವುದಾಗಿ ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶದ ಪೌರಾಡಳಿತ ಸಂಸ್ಥೆಯ ಅಧ್ಯಕ್ಷ ಅಖಿಲೇಶ್‌ ಖಾಂಡೆಲ್‌ವಾಲಿ ಬಹುಮಾನ ಘೋಷಿಸಿದ್ದಾರೆ.
ಸಂಜಯ್‌ ಬನ್ಸಾಲಿ "ಪದ್ಮಾವತಿ" ಚಿತ್ರದಲ್ಲಿ ಇತಿಹಾಸವನ್ನು ತಿರುಚಿದ್ದಾರೆ. ಇತಿಹಾಸದಲ್ಲಿ ಇಲ್ಲದ್ದನ್ನು ಚಿತ್ರದಲ್ಲಿ ಸೇರಿಸಿಕೊಂಡು ಸಾರ್ವಜನಿಕವಾಗಿ ಕೆಟ್ಟ ಅಭಿಫ್ರಾಯ ಮೂಡುವಂತೆ ಮಾಡಿದ್ದಾರೆ. ಈ ಕಾರಣದಿಂದಾಗಿ ಇದನ್ನು ನೋಡಿ ನಮಗೆ ಸುಮ್ಮನಿರಲು ಸಾಧ್ಯವಿಲ್ಲ” ಎಂದು  ಅಖಿಲೇಶ್‌ ಫೇಸ್‌ಬುಕ್‌ ನಲ್ಲಿ ಹೇಳಿದ್ಧಾರೆ.
ಮಧ್ಯಪ್ರದೇಶದ ಹೊಸಂಗಾಬಾದ್‌ ಪೌರಾಡಳಿತ ಸಂಸ್ಥೆಯೊಂದರ   ಅಧ್ಯಕ್ಷ ಅಖಿಲೇಶ್‌ ಖಾಂಡೆಲ್‌ವಾಲಿ  ಉದ್ರೇಕಕಾರಿ ಹೇಳಿಕೆ ನೀಡಿದ್ದಾರೆ," ಕೇಸರಿ ನಾಯಕರೊಬ್ಬರು ಅನೈತಿಕ ಪೊಲೀಸ್‌ ಪಾತ್ರ ನಿರ್ವಹಿಸಲು ಮುಂದಾಗಿದ್ಧಾರೆ" ಎಂದು  ಅಭಿಪ್ರಾಯಪಟ್ಟಿರುವ ಭೋಪಾಲ್‌ನ ಕಾಂಗ್ರೆಸ್ ವಕ್ತಾರೊಬ್ಬರು ಅಖಿಲೇಶ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News