ಬಹರೈನ್‌ನಲ್ಲಿ ಪೊಲೀಸಧಿಕಾರಿ ಹತ್ಯೆ
ಮನಾಮ,ಜ.30: ನಿಲಾದಲ್ ಖದೀಮ್‌ನಲ್ಲಿ ಪೊಲೀಸಧಿಕಾರಿಯೊಬ್ಬರನ್ನು ಅಜ್ಞಾತ ಬಂದೂಕು ಧಾರಿಗಳು ಗುಂಡುಹಾರಿಸಿ ಕೊಲೆ ಮಾಡಿದ್ದಾರೆ. ಹಿಶಾಂ ಅಲ್ ಹಮ್ಮಾದಿ ತನ್ನ ಫಾರ್ಮ್‌ನಲ್ಲಿ ಗುಂಡೇಟಿಗೀಡಾಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇವರನ್ನು ಭಯೋತ್ಪಾದಕರು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದೆ. ಇದು ಭಯೋತ್ಪಾದನಾ ದಾಳಿಯೆಂದು ಬಹರೈನ್ ಗೃಹಸಚಿವಾಲಯ ಹೇಳಿಕೆಯಲ್ಲಿತಿಳಿಸಿದೆ. ಗುಂಡೇಟಿಗೆ ಬಲಿಯಾದಾಗ ಇವರು ಕರ್ತವ್ಯದಲ್ಲಿರಲಿಲ್ಲ.
ಘಟನೆಯ ನಂತರ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತುಏರ್ಪಡಿಸಲಾಗಿದೆ. ಸರಾಯ ಎನ್ನುವ ತಂಡ ಕೊಲೆಕೃತ್ಯದ ಹೊಣೆಯನ್ನು ವಹಿಸಿಕೊಂಡಿದೆ ಎಂದು ರಾಷ್ಟ್ರೀಯ ವೆಬ್‌ಸೈಟ್ ವರದಿ ಮಾಡಿದೆ. ಬಹರೈನ್‌ನಲ್ಲಿ ಈ ಹಿಂದೆ ನಡೆದ ಕೆಲವು ದಾಳಿಯ ಹೊಣೆಯನ್ನು ಇದೇ ಗುಂಪು ವಹಿಸಿಕೊಂಡಿದೆ. ಈ ವರ್ಷ ಇದು ಎರಡನೆ ಘಟನೆಯಾಗಿದೆ. ಈ ಬಗ್ಗೆ ಗೃಹಸಚಿವಾಲಯ ಆತಂಕವ್ಯಕ್ತಪಡಿಸಿದೆ. ಮೃತರ ಕುಟುಂಬಕ್ಕೆ ಹಾಗೂ ಬಹರೈನ್ ಜನತೆಗೆ ಗೃಹಸಚಿವ ಲೆಪ್ಟಿನೆಂಟ್ ಜನರಲ್ ಶೇಖ್ ರಾಶಿದ್ ಬಿನ್ ಅಬ್ದುಲ್ಲ ಅಲ್‌ಖಲೀಫ ಶೋಕ ಸೂಚಿಸಿದ್ದಾರೆಂದು ವರದಿ ತಿಳಿಸಿದೆ.