×
Ad

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಜಯ ಮಲ್ಯಗೆ ನೆರವಾಗಿದ್ದರು: ಬಿಜೆಪಿ

Update: 2017-01-30 18:29 IST

ಹೊಸದಿಲ್ಲಿ,ಜ.30: ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಳ್ಳಲು ಮದ್ಯದ ದೊರೆ ವಿಜಯ ಮಲ್ಯಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೆರವಾಗಿದ್ದರು ಎಂದು ಬಿಜೆಪಿ ಸೋಮವಾರ ಆರೋಪಿಸಿದೆ. ತನ್ನ ಆರೋಪಕ್ಕೆ ಸಂಬಂಧಿಸಿದಂತೆ ಅದು ಮಾಧ್ಯಮಗಳಲ್ಲಿ ವರದಿಯಾಗಿದ್ದ ಪತ್ರಗಳನ್ನು ಉಲ್ಲೇಖಿಸಿದೆ.

 ಮಲ್ಯ 2011 ಮತ್ತು 2013ರಲ್ಲಿ ಸಿಂಗ್ ಮತ್ತು ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರಿಗೆ ಪತ್ರಗಳನ್ನು ಬರೆದ ನಂತರ ಯುಪಿಎ ಸರಕಾರವು ಅವರಿಗೆ ಸಾಲವನ್ನು ದೊರಕಿಸುವಲ್ಲಿ ನೆರವಾಗಿತ್ತು ಎಂಬ ವರದಿಯನ್ನು ಬಿಜೆಪಿ ಉಲ್ಲೇಖಿಸಿದೆ.

ಈಗ ನಿಷ್ಕ್ರಿಯಗೊಂಡಿರುವ ಮಲ್ಯರ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಬ್ಯಾಂಕುಗಳ ಕೂಟದಿಂದ ಸಾಲ ನೀಡಿಕೆಯನ್ನು ತ್ವರಿತಗೊಳಿಸುವಂತೆ ಪತ್ರಗಳಲ್ಲಿ ಕೋರಲಾಗಿತ್ತು ಎಂದೂ ಅದು ಬೆಟ್ಟು ಮಾಡಿದೆ.

ಇಷ್ಟೊಂದು ಭಾರೀ ಮೊತ್ತವನ್ನು ಮಲ್ಯ ಎಲ್ಲಿಂದ ಪಡೆದುಕೊಂಡಿದ್ದರು ? ಮುಳುಗುತ್ತಿದ್ದ ಹಡಗು (ಕಾಂಗ್ರೆಸ್) ಮುಳುಗುತ್ತಿದ್ದ ವಿಮಾನಯಾನ ಸಂಸ್ಥೆ ್ಥೆ(ಕಿಂಗ್‌ಫಿಷರ್)ಗೆ ನೆರವಾಗಿತ್ತೇ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದರು.

ಮಲ್ಯ ಸಾಲವನ್ನು ಬಾಕಿಯಿರಿಸಿದ್ದರೂ ಅವರಿಗೆ ಮೇಲಿಂದ ಮೇಲೆ ಸಾಲಗಳನ್ನು ನೀಡಲಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News