×
Ad

10,000 ನಿರಾಶ್ರಿತರಿಗೆ ಉದ್ಯೋಗ ‘ಸ್ಟಾರ್‌ಬಕ್ಸ್’ ಘೋಷಣೆ :ಟ್ರಂಪ್ ಗೆ ಅಮೆರಿಕನ್ನರಿಂದಲೇ ಪ್ರತಿರೋಧ

Update: 2017-01-30 20:52 IST

ವಾಶಿಂಗ್ಟನ್, ಜ. 30: ಮುಂದಿನ ಐದು ವರ್ಷಗಳಲ್ಲಿ 10,000 ನಿರಾಶ್ರಿತರಿಗೆ ಉದ್ಯೋಗ ನೀಡುವುದಾಗಿ ಅಮೆರಿಕದ ಬೃಹತ್ ಕಾಫಿ ಕಂಪೆನಿ ಹಾಗೂ ಕಾಫಿ ಅಂಗಡಿಗಳ ಸಮೂಹ ಸ್ಟಾರ್‌ಬಕ್ಸ್ ಹೇಳಿದೆ.

ಸಿರಿಯ ನಿರಾಶ್ರಿತರಿಗೆ ಆಶ್ರಯ ನಿರಾಕರಿಸುವ ಹಾಗೂ ಇತರ ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ಜನರಿಗೆ ಅಮೆರಿಕ ಪ್ರವೇಶ ನಿಷೇಧಿಸುವ ಟ್ರಂಪ್‌ರ ಆದೇಶಕ್ಕೆ ಪ್ರತಿಯಾಗಿ ಕಂಪೆನಿ ಈ ಕೊಡುಗೆ ನೀಡಿದೆ.

ಜಗತ್ತಿನಾದ್ಯಂತ ಇರುವ ಅಂಗಡಿಗಳಿಗೆ ನಿರಾಶ್ರಿತರನ್ನು ಉದ್ಯೋಗಿಗಳನ್ನಾಗಿ ನೇಮಿಸಿಕೊಳ್ಳಲಾಗುವುದು ಹಾಗೂ ಈ ಪ್ರಕ್ರಿಯೆಗೆ ಅಮೆರಿಕದಲ್ಲಿ ಚಾಲನೆ ನೀಡಲಾಗುವುದು ಎಂದು ಕಾಫಿ ಚಿಲ್ಲರೆ ಅಂಗಡಿಗಳ ಸಮೂಹದ ಅಧ್ಯಕ್ಷ ಹಾಗೂ ಸಿಇಒ ಹೊವಾರ್ಡ್ ಶುಲ್ಝ್ ರವಿವಾರ ಉದ್ಯೋಗಿಗಳಿಗೆ ಬರೆದ ಪತ್ರವೊಂದರಲ್ಲಿ ಹೇಳಿದ್ದಾರೆ.

ಅಮೆರಿಕದ ಸೈನಿಕರಿಗೆ ಭಾಷಾಂತರಕಾರರಾಗಿ ಹಾಗೂ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಿರುವ ವಲಸಿಗರನ್ನು ಕಂಪೆನಿಗೆ ಸೇರಿಸಿಕೊಳ್ಳಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News