ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಕಮ್ಮಾಡಿ ಪುನರಾಯ್ಕೆ

Update: 2017-01-30 15:43 GMT

ಪುತ್ತೂರು , ಜ.30 : ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‌ನ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಹಾಜಿ ಎಸ್.ಇಬ್ರಾಹಿಂ ಕಮ್ಮಾಡಿಯವರ ಅಧ್ಯಕ್ಷತೆಯಲ್ಲಿ ಕಮ್ಮಾಡಿ ಸಭಾಂಗಣದಲ್ಲಿ ಜರಗಿತು.

ನೂತನ ಅಧ್ಯಕ್ಷರಾಗಿ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಅವರು ಪುನರಾಯ್ಕೆಗೊಂಡರು. ಕಳೆದ 15 ವರ್ಷಗಳಿಂದ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಅವರು ಸಂಯುಕ್ತ ಜಮಾಅತ್‌ನ ಅಧ್ಯಕ್ಷರಾಗಿ ಮನ್ನಡೆಸಿಕೊಂಡು ಬರುತ್ತಿದ್ದು ಅವರನ್ನು ಅಧ್ಯಕ್ಷರಾಗಿ ಮುಂದುವರಿಯುವಂತೆ ಕೇಳಿಕೊಳ್ಳುವುದು ಎಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ ,  ಸಮುದಾಯಕ್ಕೆ ಕಮ್ಮಾಡಿ ಇಬ್ರಾಹಿಂ ಹಾಜಿ ಅವರ ಕೊಡುಗೆ ಅಪಾರವಾಗಿದ್ದು, ಮುಸ್ಲಿಂ ಸಮುದಾಯದ ಅಭಿಮಾನದ ಸಂಕೇತವಾಗಿ ಅವರ ನೇತೃತ್ವದಲ್ಲಿ ಬಹುದೊಡ್ಡ ಆಸ್ಪತ್ರೆಯೊಂದು ನಿರ್ಮಾಣವಾಗುತ್ತಿರುವುದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್.ಬಿ. ದಾರಿಮಿ, ಸತ್ತಾರ್ ಸಖಾಫಿ, ಸಂಯುಕ್ತ ಜಮಾಅತ್ ಉಪಾಧ್ಯಕ್ಷರಾದ ಹಾಜಿ ಮುಸ್ತಫಾ ಕೆಂಪಿ, ಅರ್ತಿಕೆರೆ ಅಬ್ದುಲ್ ರಹಿಮಾನ್ ಹಾಜಿ ಶುಭ ಹಾರೈಸಿದರು.

ಸಂಯುಕ್ತ ಜಮಾಅತ್‌ನ ವತಿಯಿಂದ ಮುಸ್ಲಿಂ ಸಮುದಾಯಕ್ಕೆ ಸರಕಾರದಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಯುಕ್ತ ಜಮಾಅತ್‌ನ ಪದಾಕಾರಿ ಬೈತಡ್ಕ ಅಬ್ದುಲ್ ರಹಿಮಾನ್ ಹಾಜಿ, ಪುತ್ತೂರು ಟಿಂಬರ್ ಕೆ.ಪಿ.ಮುಹಮ್ಮದ ಹಾಜಿ, ಉಮ್ಮರ್ ಹಾಜಿ ಕೂರ್ನಡ್ಕ ಉಪಸ್ಥಿತರಿದ್ದರು.

ಸಂಯುಕ್ತ ಜಮಾತ್‌ನ ವಿವಿಧ ಪದಾಧಿಕಾರಿಗಳಾದ ಉಮ್ಮರ್ ಹಾಜಿ ಚಾಪಳ್ಳ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ರಹಿಮಾನ್ ಅಝಾದ್, ಪುತ್ತುಬಾವು ಸವಣೂರು, ಇಬ್ರಾಹಿಂ ಸೋಂಪಾಡಿ, ಇಬ್ರಾಹಿಂ ಹಾಜಿ ತಿಂಗಳಾಡಿ, ಕಣ್ಣೂರು ಯೂಸುಫ್ ಹಾಜಿ, ಖಾಸಿಂ ಹಾಜಿ ತಿಂಗಳಾಡಿ ,  ಅಬ್ದುಲ್ ಕರೀಂ ಸವಣೂರು, ಅಶ್ರಫ್ ಕಲ್ಲೇಗ, ಉದಯ ಹನೀಫ್, ಅಬ್ದುಲ್ ಹಮೀದ್ ಸೋಂಪಾಡಿ ಮತ್ತಿತರರು ಉಪಸ್ಥಿತರಿದ್ದು  , ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ಪ್ರಧಾನ ಕಾರ್ಯದರ್ಶಿ ಬಿ. ಎ .ಶುಕೂರು ಹಾಜಿ ಸ್ವಾಗತಿಸಿರು.

ಕಾರ್ಯದರ್ಶಿಗಳಾದ ಕೆಎಂ ಬಾವ ಹಾಜಿ ವರದಿ ವಾಚಿಸಿದರು.

ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News