ಉಡುಪಿ : ಮಾ.5ರಂದು ಮಣಿಪಾಲ್ ಹಾಫ್ ಮ್ಯಾರಾಥಾನ್
ಉಡುಪಿ, ಜ.30: ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಉಡುಪಿ ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಸಂಸ್ಥೆಯ ಸಹಯೋಗದೊಂದಿಗೆ ಮಣಿಪಾಲ್ ಹಾಫ್ ಮ್ಯಾರಾಥಾನ್‌ನ್ನು ಮಾ.5ರಂದು ಮಣಿಪಾಲದಲ್ಲಿ ಹಮ್ಮಿ ಕೊಳ್ಳಲಾಗಿದೆ.
ಈ ಸ್ಪರ್ಧೆಯು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ನಡೆಯಲಿದ್ದು, ಭಾಗವಹಿಸುವ ಎಲ್ಲ ಅಭ್ಯರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯು ಸುಮಾರು ಐದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಮ್ಯಾರಾಥಾನ್ ಸಮಿತಿಯ ಅಧ್ಯಕ್ಷ ಕೆ.ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
21ಕಿ.ಮೀ. ದೂರದ ಹಾಫ್ ಮ್ಯಾರಾಥಾನ್‌ನ ವಿಜೇತರಿಗೆ ಪ್ರಥಮ 70ಸಾವಿರ ರೂ., ದ್ವಿತೀಯ 35ಸಾವಿರ ರೂ., ತೃತೀಯ 20ಸಾವಿರ ಮತ್ತು 4ರಿಂದ 10ನೆ ಸ್ಥಾನಕ್ಕಾಗಿ 5ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
10ಕಿ.ಮೀ. ಓಟ ಸ್ಪರ್ಧೆಯ ವಿಜೇತರಿಗೆ ಪ್ರಥಮ 10ಸಾವಿರ, ದ್ವಿತೀಯ 7ಸಾವಿರ ರೂ., ತೃತೀಯ 5ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಇದರಲ್ಲಿ ಮುಕ್ತ ವಿಭಾಗ, ಉಡುಪಿ ಜಿಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರ ವಿಭಾಗ ಹಾಗೂ ಹಿರಿಯ ನಾಗರಿಕರ ವಿಭಾಗಗಳನ್ನು ಮಾಡಲಾಗಿದೆ.
ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಐದು ಕಿ.ಮೀ. ಮತ್ತು ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರಿಗೆ 3ಕಿ.ಮೀ. ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ವಿಜೇತರಾದವರಿಗೆ ಪ್ರಥಮ 5ಸಾವಿರ, ದ್ವಿತೀಯ 3ಸಾವಿರ, ತೃತೀಯ 2ಸಾವಿರ ರೂ. ಮತ್ತು 4ರಿಂದ 6ಸ್ಥಾನಗಳನ್ನು ಪಡೆದವರಿಗೆ ನಗದು ಬಹುಮಾನ ನೀಡಲಾಗುವುದು. ಮ್ಯಾರಥಾನ್ ಸ್ಪರ್ಧೆ ಯನ್ನು ಪೂರ್ತಿಗೊಳಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲೇ ಪ್ರಥಮ ಬಾರಿಗೆ 21ಕಿ.ಮೀ. ಹಾಗೂ 10ಕಿ.ಮೀ. ಓಟದ ಸ್ಪರ್ಧಾಳುಗಳಿಗೆ ಚಿಪ್ ಅಳವಡಿಸಲಾಗುವುದು. ಆಸಕ್ತರು ಆನ್‌ಲೈನ್ (www.manipal.marathon.com)ನಲ್ಲಿಯೂ ತಮ್ಮ ಹೆಸರನ್ನು ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗೆ ಮೊ-9449481776, 9986821071ನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಅಮೆಚ್ಯೂರ್ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಅಶೋಕ್ ಅಡ್ಯಂತಾಯ, ಬಾಲಕೃಷ್ಣ ಹೆಗ್ಡೆ, ಡಾ.ಗಿರೀಶ್ ಮೆನನ್, ರಘುರಾಮ ನಾಯಕ್ ಉಪಸ್ಥಿತರಿದ್ದರು.