ವೇಶ್ಯಾವಾಟಿಕೆ ಆರೋಪ: ಇಬ್ಬರ ಬಂಧನ
ಮಂಗಳೂರು, ಜ.30: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಸೋಮವಾರ ಇಬ್ಬರನ್ನು ಬಂಧಿಸಿದ್ದಾರೆ.
ಕೋಟೆಕಾರು ಸಮೀಪದ ಶೇಖ್ ಮುಹಮ್ಮದ್ ರಫೀಕ್ (40), ಮಡಿಕೇರಿಯ ಬಾಳುಗೋಡು ನಿವಾಸಿ ದೀಪಕ್ (43) ಬಂಧಿತರು.
ಆರೋಪಿಗಳಿಂದ ರಿಕ್ಷಾ, 2 ಮೊಬೈಲ್ ಫೋನ್ ಹಾಗೂ 12,500 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಕೆ.ಎಸ್.ರಾವ್ ರಸ್ತೆಯ ಲಾಡ್ಜ್‌ವೊಂದನ್ನು ಕೇಂದ್ರೀಕರಿಸಿ ಈ ಇಬ್ಬರು ಆರೋಪಿಗಳು ವೆಬ್‌ಸೈಟ್ ಮೂಲಕ ಗ್ರಾಹಕರನ್ನು ಪತ್ತೆಹಚ್ಚಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ನಗರದ ಹಳೆ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಬಂದರ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿಸಿಬಿ ವಿಭಾಗದ ಇನ್‌ಸ್ಪೆಕ್ಟರ್ ಸುನೀಲ್ ವೈ. ನಾಯಕ್ ಮತ್ತು ಪಿಎಸ್ಸೈ ಶ್ಯಾಮ್ ಸುಂದರ್ ಹಾಗು ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.