×
Ad

ಪಿಲಾರು: ಮದರಸ ಅಧ್ಯಕ್ಷರಿಗೆ ಹಲ್ಲೆ

Update: 2017-01-30 23:21 IST

ಉಳ್ಳಾಲ , ಜ.30  : ಪಿಲಾರು ಮದನಿ ಮದರಸ ಸಮೀಪ ಮದರಸ ಅಧ್ಯಕ್ಷರಿಗೆ ಯುವಕನೊರ್ವ ಬೈಕಿನಿಂದ ಢಿಕ್ಕಿ ಹೊಡೆದು ಇಂಟರಲಾಕ್ ಮೂಲಕ ಮಸೀದಿ ಅಧ್ಯಕ್ಷನ ತಲೆಗೆ ಬಡಿದು ಗಂಭೀರ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಪಿಲಾರು ಮದನಿ ಮದರಸದ ಅಧ್ಯಕ್ಷ ಮಹಮ್ಮದ್ ಅಸ್ಲಂ ಕೆ.ಎಂ ನೂರುಲ್ಲಾ ಕೊಲೆಯತ್ನಕ್ಕೆ ಒಳಗಾದ ವ್ಯಕ್ತಿಯಾಗಿದ್ದಾರೆ. ಪಿಲಾರು ದಾರಂದಬಾಗಿಲು ನಿವಾಸಿ ಪಿ.ಸಿ.ಝಾಕಿರ್ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಸೋಮವಾರ ಸಂಜೆ ವೇಳೆ ಮದರಸ ಸಮೀಪ ಪ್ರಾರ್ಥನೆಗೆಂದು ಬಂದಿದ್ದ ನೂರುಲ್ಲಾ ಅವರು ಮದರಸ ಹೊರಗೆ ನಿಂತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಆರೋಪಿ ಝಾಕಿರ್ ಬೈಕಿನಿಂದ ಗುದ್ದಿ ಕೆಳಗೆ ಉರುಳಿಸಿದ್ದಾನೆ. ಆ ಬಳಿಕ ಸ್ಥಳದಲ್ಲಿದ್ದ ಇಂಟರ್ ಲಾಕ್‌ನಿಂದ ನೂರುಲ್ಲಾ ಅವರ ತಲೆಗೆ ಬಡಿದು ಗಾಯ ಮಾಡಿರುವುದಲ್ಲದೆ, ಜೀವಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಾಯಗೊಂಡ ನೂರುಲ್ಲಾ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News