×
Ad

ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಆಯ್ಕೆ

Update: 2017-01-30 23:34 IST

ಮಂಗಳೂರು, ಜ.30: ಮಂಗಳೂರು ಉತ್ತರ ಧಕ್ಕೆಯ ‘ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ’ಕ್ಕೆ ಐದು ವರ್ಷಗಳ ಅವಧಿಗೆ ಸೋಮವಾರ ಚುನಾವಣೆ ನಡೆದಿದೆ.

ರಾಜ್ಯ ಸಹಕಾರಿ ಸಂಘದ ಅಧಿನಿಯಮದ ಪ್ರಕಾರ ಈ ಚುನಾವಣೆ ನಡೆದಿದ್ದು, ಸಾಮಾನ್ಯ ವರ್ಗಕ್ಕೆ 9, ಹಿಂದುಳಿದ ವರ್ಗ (ಅ) 2, ಎಸ್ಸಿ-ಎಸ್ಟಿ ತಲಾ 2 ಹಾಗೂ ಮಹಿಳೆಯರಿಗೆ ಎರಡು ಸ್ಥಾನಗಳು ಮೀಸಲಾಗಿತ್ತು. ಜ.21ರಂದು ನಿಗದಿಯಂತೆ 16 ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆ ನಡೆಯುವ ಲಕ್ಷಣ ಗೋಚರಿಸಿದ್ದವು. ಆದರೆ ಮೂವರು ಅಭ್ಯರ್ಥಿಗಳು ಜ.23ರಂದು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಅವಿರೋಧ ಆಯ್ಕೆ ನಡೆದಿತ್ತು. ಎಸ್ಸಿ-ಎಸ್ಟಿ ಅಭ್ಯರ್ಥಿಗಳು ಇಲ್ಲದ ಕಾರಣ 13 ನಿರ್ದೇಶಕರು ಆಯ್ಕೆಯಾದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದರೂ ಪ್ರತ್ಯೇಕ ನಾಮಪತ್ರ ಸಲ್ಲಿಕೆಯಾಗದ ಕಾರಣ ಅಧ್ಯಕ್ಷರಾಗಿ ಜೆ.ಮುಹಮ್ಮದ್ ಇಸಾಕ್, ಉಪಾಧ್ಯಕ್ಷರಾಗಿ ಅಹ್ಮದ್ ಬಾವ ಬಜಾಲ್ ಪುನರಾಯ್ಕೆಯಾದರು.

ನಿರ್ದೇಶಕರಾಗಿ ಎಂ.ಎ.ಗಫೂರ್, ಟಿ.ಎಚ್.ಹಮೀದ್, ಯು.ಟಿ.ಅಹ್ಮದ್ ಶರೀಫ್, ಎಸ್.ಎಂ.ಇಬ್ರಾಹೀಂ, ಎ.ಎಂ.ಕೆ.ಮುಹಮ್ಮದ್ ಇಬ್ರಾಹೀಂ, ಮುಹಮ್ಮದ್ ಅಶ್ರಫ್, ಎಸ್.ಕೆ.ಇಸ್ಮಾಯೀಲ್, ಪಿ.ಪಿ.ಮೊಯಿನ್ ಪಾಷ, ಬಿ. ಇಬ್ರಾಹೀಂ ಕೆ.ಎಂ.ಎಚ್., ಸೂದತ್ ಪಿ.ಪಿ. ಹಾಗೂ ಫಾತಿಮತ್ ರೊಹರಾ ಆಯ್ಕೆಯಾದರು. ಸಹಕಾರಿ ಇಲಾಖಾಧಿಕಾರಿ ಎನ್.ಜೆ.ಗೋಪಾಲ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಸಿಇಒ ಡಿ.ಅಬ್ದುಲ್ಲತೀಫ್ ಸಹಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News