ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಪುಣ್ಯತಿಥಿ
ಮಂಗಳೂರು, ಜ.30: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪಕ್ಷದ ಕಚೇರಿಯಲ್ಲಿ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ಸೋಮವಾರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ದೇಶಾದ್ಯಂತ ಎಲ್ಲ ಧರ್ಮ ಮತ್ತು ವರ್ಗಗಳ ಬೆಂಬಲವನ್ನು ಪಡೆದು ಜನನಾಯಕ ಹೇಗಿರಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಗಾಂಧೀಜಿಯ ಕನಸನ್ನು ನನಸು ಮಾಡಲು ಕಟಿಬದ್ಧರಾಗಬೇಕು ಎಂದರು.
ಈ ಸಂದರ್ಭ ಶಾಸಕ ಜೆ.ಆರ್.ಲೋಬೊ, ಮೇಯರ್ ಹರಿನಾಥ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಅಶ್ರಫ್.ಕೆ, ಹಿಲ್ಡಾ ಆಳ್ವ, ಹರ್ಷರಾಜ್ ಮುದ್ದ, ಬಾಲಕೃಷ್ಣ ಶೆಟ್ಟಿ, ವಿಶ್ವಾಸ್ ಕುಮಾರ್‌ದಾಸ್, ಕಾರ್ಪೊರೇಟರ್‌ಗಳಾದ ಕವಿತಾ ಸನಿಲ್, ಅಶೋಕ್ ಡಿ.ಕೆ., ಆಶಾ ಡಿಸಿಲ್ವ, ಕವಿತಾ ವಾಸು, ಟಿ.ಕೆ ಶೈಲಜಾ, ಅಖಿಲಾ ಆಳ್ವ, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್, ರತಿಕಲಾ, ಪದ್ಮನಾಭ ಅಮೀನ್, ಜಯಶೀಲಾ ಅಡ್ಯಂತಾಯ, ಸಿ.ಎಮ್.ಮುಸ್ತಫಾ, ತೆರೇಸಾ ಪಿಂಟೊ, ಸತೀಶ್ ಪೆಂಗಲ್, ಸಂತೋಷ್ ಶೆಟ್ಟಿ, ಅನ್ಸಾರ್ ಶಾಲಿಮಾರ್, ಕೃತಿನ್ ಕುಮಾರ್, ಶಬೀರ್ ಸಿದ್ದಕಟ್ಟೆ, ಶುಬೋದ್ ಆಳ್ವ, ದುರ್ಗಾ ಪ್ರಸಾದ್, ನಝೀರ್ ಬಜಾಲ್ ಉಪಸ್ಥಿತರಿದ್ದರು. ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಎಚ್.ಎಂ.ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು. ಟಿ.ಕೆ ಸುಧೀರ್ ವಂದಿಸಿದರು.