ಉಪ್ಪಿನಂಗಡಿ: ರಸ್ತೆ ಬದಿ ವ್ಯಾಪಾರಿಗಳ ತೆರವು
ಉಪ್ಪಿನಂಗಡಿ, ಜ.30: ಇಲ್ಲಿನ ರಸ್ತೆ ಬದಿಯಲ್ಲಿ ಅನಕೃತವಾಗಿ ವ್ಯಾಪಾರ ಮಾಡಿಕೊಂಡು ವಾಹನ ಸಂಚಾರದ ಅವ್ಯವಸ್ಥೆಗೆ ಕಾರಣವಾಗುತ್ತಿದ್ದ ವ್ಯಾಪಾರಿಗಳ ವಿರುದ್ಧ ಪಂಚಾಯತ್ ಆಡಳಿತ ಕಟ್ಟು ನಿಟ್ಟಿನ ಕ್ರಮ ಜರಗಿಸಲು ಮುಂದಾಗಿದ್ದು, ಸೋಮವಾರ ವ್ಯಾಪಾರಿಗಳು ರಸ್ತೆ ಬದಿ ಇಟ್ಟಿದ್ದ ಮಾರಾಟದ ಸೊತ್ತುಗಳನ್ನು ಸ್ವಾೀನಪಡಿಸಿಕೊಂಡಿದೆ. ಉಪ್ಪಿನಂಗಡಿ ಸರ್ಕಲ್ ಬಳಿಯ ಪೆರಿಯಡ್ಕ ಕಡೆಗೆ ಹೋಗುವ ಆಟೊ ನಿಲ್ದಾಣದ ಪಕ್ಕದಲ್ಲಿ ರಸ್ತೆಬದಿಯೇ ಮೀನು, ಬಟ್ಟೆ, ತರಕಾರಿ ಹೀಗೆ ಹತ್ತು ಹಲವು ಉತ್ಪನ್ನಗಳನ್ನು ರಸ್ತೆ ಬದಿಯೇ ರಾಶಿ ಹಾಕಿಕೊಂಡು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿತ್ತಲ್ಲದೆ, ವಾಹನ ಸಂಚಾರಕ್ಕೂ ತೊಡಕಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನನ್ವಯ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ, ಯಾವುದೇ ಸ್ಪಂದನೆ ಇರಲಿಲ್ಲ ಎನ್ನಲಾಗಿದೆ. ರಸ್ತೆ ಬದಿ ಈ ವ್ಯಾಪಾರದಿಂದಾಗಿ ಸಮಸ್ಯೆಗೆ ಸಿಲುಕಿದ್ದ ರಿಕ್ಷಾ ಚಾಲಕರು ಕೊನೆಗೆ ಉಪ್ಪಿನಂಗಡಿ ಪಂಚಾಯತ್ ಆಡಳಿತಕ್ಕೆ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ್ದ ಕಾರ್ಯದರ್ಶಿ ರೋಹಿತ್ ಮತ್ತವರ ಸಿಬ್ಬಂದಿ, ಪಂಚಾಯತ್ ವಾಹನವನ್ನು ತಂದು ಮಾರಾಟಕ್ಕೆ ಇರಿಸಲಾಗಿದ್ದ ವಸ್ತುಗಳನ್ನೆಲ್ಲಾ ಸ್ವಾೀನ ಪಡಿಸಿದರು.
ಬಳಿಕ ಇಂತಹ ವರ್ತನೆ ತೋರಬಾರದೆಂದು ಎಚ್ಚರಿಕೆ ನೀಡಿ, ಸ್ವಾೀನ ಪಡಿಸಿದ್ದ ವಸ್ತುಗಳನ್ನು ಹಿಂದಿರುಗಿಸಲಾಯಿತು.