ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಡಿದ್ದರೇ ವಿನಃ ದ್ವೇಷಿಸಲಿಲ್ಲ: ಡಾ. ಇರ್ವತ್ತೂರು

Update: 2017-01-30 18:22 GMT

ಮಂಗಳೂರು, ಜ.30: ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಬಲವಿರಲಿ, ಒಂದು ಹಂತದ ಬಳಿಕ ಆ ಬಲದಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ಇನ್ನೊಬ್ಬರ ನೋವನ್ನು ತಿಳಿಯುವ ಮನಸ್ಥಿತಿಯನ್ನು ಪಡೆಯದೆ ಯಶಸ್ಸು ಸಾಧ್ಯವಾಗದು ಎಂಬುದನ್ನೂ ಗಾಂಧೀಜಿ ತಿಳಿದುಕೊಂಡಿಕೊಂಡಿದ್ದರು. ಆದ್ದರಿಂದಲೇ ಗಾಂಧೀಜಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೂ ಕೂಡ ಎಂದೂ ಅವರನ್ನು ದ್ವೇಷಿಸಲಿಲ್ಲ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು ಹೇಳಿದರು.

ಮಂಗಳೂರಿನ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಸೋಮವಾರ ಗಾಂಧಿ ಪುಣ್ಯತಿಥಿಯ ಅಂಗವಾಗಿ ನಗರದಠಾಗೋರ್ ಪಾರ್ಕ್‌ನ ಪ್ರತಿಷ್ಠಾನದಲ್ಲಿ ನಡೆದ ಗಾಂಧಿಸ್ಮತಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.

ಗಾಂಧೀವಾದ ಯಾವ ಪ್ರಯೋಜನಕ್ಕೂ ಬರುವುದಿಲ್ಲ ಎಂಬ ಧೋರಣೆ ಇತ್ತೀಚೆಗೆ ವ್ಯಕ್ತವಾಗುತ್ತಿದೆ. ಇದು ದೇಶಕ್ಕೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ಉದಯ ಕುಮಾರ್ ಇರ್ವತ್ತೂರು ಹೇಳಿದರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ. ಪ್ರಭಾಕರ ಶ್ರೀಯಾನ್, ಪತ್ರಕರ್ತ ಹಂಝ ಮಲಾರ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಡಾ. ಎನ್. ಇಸ್ಮಾಯಿಲ್ ಸ್ವಾಗತಿಸಿದರು. ನಾಗೇಶ್ ಕಲ್ಲೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News