ಅಮೆಮಾರ್‌ನಲ್ಲಿ ಕ್ರಿಕೆಟ್: ಉಳಾಯಿಬೆಟ್ಟು ತಂಡಕ್ಕೆ ಪ್ರಶಸ್ತಿ
ಫರಂಗಿಪೇಟೆ, ಜ.31: ಅಮೆಮಾರ್‌ನ ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳಾಯಿಬೆಟ್ಟುವಿನ ಇ, ಟು ಗೈಸ್ ತಂಡವು ಪ್ರಥಮ ಪ್ರಶಸ್ತಿ ಜಯಿಸಿದೆ. ಬೆಂಗರೆ ಗ್ರೀನ್‌ಲೈನ್ಸ್ ತಂಡ ದ್ವಿತೀಯ, ವಳಚ್ಚಿಲ್‌ನ ಇಲೆವನ್ ಸ್ಟಾರ್ ತೃತೀಯ ಹಾಗೂ ಅಡ್ಯಾರ್‌ನ ಚಾಲೆಂಜ್ ಚಂದವು ಚತುರ್ಥ ಬಹುಮಾನ ಗಳಿಸಿದೆ.
ಆಲ್ ರೌಂಡರ್ ಆಗಿ ನೌಫಲ್ ಉಳಾಯಿಬೆಟ್ಟು, ಉತ್ತಮ ಎಸೆತಗಾರರಾಗಿ ಚರಣ್ ಬೆಂಗ್ರೆ ತಂಡ ಹಾಗೂ ಉತ್ತಮ ದಾಂಡಿಗ ಪ್ರಶಸ್ತಿಗೆ ಮಂಜುನಾಥ್ ಉಳಾಯಿಬೆಟ್ಟು ಪಾತ್ರರಾದರು
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಯಂಗ್ ಫ್ರೆಂಡ್ಸ್ ಅಧ್ಯಕ್ಷ ಸುಲೈಮಾನ್, ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷ ಡಾ.ಅಮೀರ್ ತುಂಬೆ, ಎಸ್.ಡಿ.ಟಿ.ಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಸಂತೋಷ್ ಬೊಳ್ಳಾಯಿ, ಯಂಗ್ ಫ್ರೆಂಡ್ಸ್ ಗೌರವಾಧ್ಯಕ್ಷ ಸಿದ್ದೀಕ್ ಎಂ.ಎಸ್., ಫಾರೂಕ್ ತಂಡೆಲ್ ಗೋವಾ, ಅಬ್ಬಾಸ್ ಎಫ್.ಎ, ಯಂಗ್ ಫ್ರೆಂಡ್ಸ್ ಕಾರ್ಯದರ್ಶಿ ಅನ್ಸಾರ್ ಉಪಸ್ಥಿತರಿದ್ದರು.
ಬಶೀರ್ ತಂಡೆಲ್ ಸ್ವಾಗತಿಸಿ, ವಂದಿಸಿದರು.