ಫೆ.2ರಿಂದ ರಾಜ್ಯ ಮಟ್ಟದ ಎನ್ನೆಸ್ಸೆಸ್ ಶಿಬಿರ
ಸೊರಬ, ಜ.31: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜೊಂದಕ್ಕೆ ರಾಜ್ಯ ಮಟ್ಟದ ಎನ್.ಎಸ್.ಎಸ್. ಶಿಬಿರದ ಜವಾಬ್ದಾರಿ ವಹಿಸಲಾಗಿದ್ದು, ಫೆ.2ರಂದು ಕಮರೂರು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ರಾಜ್ಯ ಮಟ್ಟದ ಎನ್‌ಎಸ್‌ಎಸ್ ಶಿಬಿರದ ಪೂರ್ವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಂತ್ರಿಕ ಶಿಕ್ಷಣ ನಿರ್ದೆಶನಾಲಯ, ಸೊರಬದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ನಡವಳಿಕೆಗಾಗಿ ಯುವಜನತೆ ಧ್ಯೇಯದೊಂದಿಗೆ ಫೆ2ರಿಂದ 8ರವರೆಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಎನ್‌ಎಸ್‌ಎಸ್ ಶಿಬರವನ್ನು ತಾಲೂಕಿನ ಚಂದ್ರಗುತ್ತಿ ಹೋಬಳಿಯ ಕಮರೂರಿನಲ್ಲಿ ಆಯೋಜಿಸಲಾಗಿದೆ.
ಫೆ.2ರಂದು ಸಂಜೆ 6ಕ್ಕೆ ಶಿಬಿರವನ್ನು ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದು, ಶಾಸಕ ಎಸ್. ಮಧು ಬಂಗಾರಪ್ಪಅಧ್ಯಕ್ಷತೆ ವಹಿಸಲಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್.ಯು.ತಳವಾರ, ಪ್ರಾಂಶುಪಾಲ ಡಿ.ಎಸ್. ರವಿಶಂಕರ್ ಉಪಸ್ಥಿತರಿರುವರು. ಗಾಂಧೀಜಿ ಕನಸಿನ ಗ್ರಾಮಗಳ ಕುರಿತು ಲೇಖಕ ಹಾಗೂ ಕನ್ನಡ ಉಪನ್ಯಾಸಕ ಡಾ. ಸರ್ಫ್ರಾಝ್ ಚಂದ್ರಗುತ್ತಿ ಉಪನ್ಯಾಸ ನೀಡಲಿದ್ದಾರೆ. ಫೆ.3ರಂದು ನಮ್ಮ ಹಳ್ಳಿಯ ಬದುಕು ಕುರಿತು ಶಿವಮೊಗ್ಗದ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ವಿಷಯ ಕುರಿತು ಭಾವನಾ ಆನವಟ್ಟಿ ಉಪನ್ಯಾಸ ನೀಡಲಿದ್ದು, ಗ್ರಾಪಂ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ4ರಂದು ನಗದು ರಹಿತ ಎಲೆಕ್ಟ್ರಾನಿಕ್ ವ್ಯವಹಾರ ಕುರಿತು ಮಾಹಿತಿ ಕರಪತ್ರ ಬಿಡುಗಡೆ ನಡೆಯಲಿದೆ. ಗ್ರಾಪಂ ಸದಸ್ಯ ಶಾಂತಪ್ಪಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.5ರಂದು ಮೂಢನಂಬಿಕೆ-ಸುದ್ದಿವಾಹಿನಿಗಳು ವಿಷಯದ ಕುರಿತು ಸಾಮಾಜಿಕ ಚಿಂತಕ ರಾಜಪ್ಪಮಾಸ್ತರ್, ಮಹಿಳೆ ಮತ್ತು ಶಿಕ್ಷಣ ಕುರಿತು ರಂಗಕರ್ಮಿ ಎಂ.ವಿ. ಪ್ರತಿಭಾ ಉಪನ್ಯಾಸ ನೀಡಲಿದ್ದಾರೆ. ಗ್ರಾಪಂ ಸದಸ್ಯ ಕೆ.ಟಿ.ಚೌಟಪ್ಪ ಅಧ್ಯಕ್ಷತೆ ವಹಿಸಲಿ ದ್ದಾರೆ.
ಫೆ.6ರಂದು ಸದೃಢ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಸಾಹಿತಿ ಡಾ.ಕುಂ.ವೀರಭದ್ರಪ್ಪ, ಮಾಧ್ಯಮ ಮತ್ತು ನೈತಿಕತೆ ಕುರಿತು ಹುಬ್ಬಳಿಯ ಸಿಎಂಜೆಯ ಪ್ರೊ.ಹರ್ಷವರ್ಧನ ವಿ. ಶೀಲವಂತ್, ಮಾಧ್ಯಮ ಮತ್ತು ಯುವ ಜನತೆ ವಿಷಯದ ಕುರಿತು ಆಂಗ್ಲ ಪತ್ರಿಕೆಯ ಜಿಲ್ಲಾ ವರದಿಗಾರ ಪಿ.ಎಂ.ವೀರೇಂದ್ರ, ಕೌಶಲ್ಯ ಅಭಿವೃದ್ಧಿ ಕುರಿತು ವ್ಯಾಲು ಎಕ್ಸ್‌ಫ್ಲೋರ್ ನಿರ್ದೇಶಕ ಹಾಲೇಶ್ ಶ್ರೀವರ ಉಪನ್ಯಾಸ ನೀಡಲಿದ್ದು, ಕಮರೂರು ಸ.ಪ್ರೌ. ಶಾಲೆಯ ಮುಖ್ಯ ಶಿಕ್ಷಕ ವಿ.ಎಚ್. ಪಂಚಾಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.7ರಂದು ಮಾನವೀಯ ವೌಲ್ಯಗಳು ಮತ್ತು ಪ್ರಸ್ತುತ ಸಮಾಜ ಕುರಿತು ಸಾಗರದ ಎಲ್‌ಬಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ತಿರುಮಲ ಮಾವಿನಕುಳಿ, ಪ್ರಾದೇಶಿಕ ಇತಿಹಾಸ ಕುರಿತು ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಉಪನ್ಯಾಸ ನೀಡಲಿದ್ದು, ಕಮರೂರು ಸ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ವಾಸುದೇವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.8ರಂದು ಶಿಬಿರ ಸಮಾರೋಪ ಸಮಾರಂಭ ಹಾಗೂ ದೀಪೋತ್ಸವ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಂಸದ ಬಿ.ಎಸ್.ಯಡಿಯೂರಪ್ಪ, ವಿಪ ಸದಸ್ಯ ಆರ್.ಪ್ರಸನ್ನ ಕುಮಾರ್, ಸಾಹಿತಿ ಡಾ. ನಾ.ಡಿಸೋಜ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಿ.ಎಸ್.ರವಿಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿ.ಜಯಣ್ಣ, ಯು.ಅರುಣ್, ಎನ್.ನಂದನ್, ಬಿ.ರಂಜಿತ್, ವಿ.ನಿಶಾಂತ್, ಸುವರ್ಣ ರಾಜಪ್ಪ, ಪಿ.ಎನ್.ವೀಣಾ, ಜಾವೀದ್ ಇಕ್ಬಾಲ್, ಎಚ್. ಜಯಪ್ಪ, ಜಿ.ಶೇಖರಪ್ಪ, ಸಿ.ನಾಗರತ್ನ್ನಾ, ಬಿ.ಲತಾ ಮತ್ತಿತರರಿದ್ದರು