×
Ad

ಮೂಡುಬಿದಿರೆ: ಸಮಸ್ತ ನೇತಾರರ ಅನುಸ್ಮರಣೆ ಮತ್ತು ಸನ್ಮಾನ ಸಮಾರಂಭ

Update: 2017-01-31 16:17 IST

ಮೂಡುಬಿದಿರೆ, ಜ.31: ಪ್ರವಾದಿಯವರ ಜೀವನ ಶೈಲಿಯನ್ನು ನಾವು ಅಳವಡಿಸಿಕೊಳ್ಳುತ್ತಾ, ಮುಂದಿನ ಜನಾಂಗಕ್ಕೂ ಅವರ ಸಂದೇಶವನ್ನು ತಲುಪಿಸುತ್ತಾ ಜೀವಿಸಬೇಕು ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ನೂತನ ಉಪಾಧ್ಯಕ್ಷ ಶೈಖುನಾ ಅಲ್ಹಾಜ್ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಕರೆ ನೀಡಿದ್ದಾರೆ.

ಅವರು ಮಂಗಳವಾರ ಮೂಡುಬಿದಿರೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ವತಿಯಿಂದ ಇಲ್ಲಿನ ಬದ್ರಿಯಾ ಟೌನ್ ಜುಮಾ ಮಸೀದಿಯಲ್ಲಿ ನಡೆದ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ, ದುಆ ಮಜ್ಲಿಸ್ ಮತ್ತು ಸನ್ಮಾನ ಸಮಾರಂದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್‌ಹರಿ ಮಾತನಾಡಿ ಶುಭ ಹಾರೈಸಿದರು.

ಪೊಸೋಟ್ ಮುದರ್ರಿಸ್ ಹಾಗೂ ಬೆಳ್ತಂಗಡಿಯ ದಾರುಸ್ಸಲಾಂ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಅಸ್ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಅನುಸ್ಮರಣಾ ಭಾಷಣ ಮಾಡಿದರು.

ಬದ್ರಿಯಾ ಟೌನ್ ಮಸೀದಿಯ ಮುದರ್ರಿಸ್ ಮುಸ್ತಫಾ ಯಮಾನಿ ಕಾರ್ಯಕ್ರಮ ಉದ್ಘಾಟಿಸಿದರು. ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ರಹ್ಮಾನ್‌ ಅಧ್ಯಕ್ಷತೆ ವಹಿಸಿದ್ದರು.

ಮದ್ರಸ ಮ್ಯಾನೇಜ್‌ಮೆಂಟ್‌ನ ಜಿಲ್ಲಾ ಕೋಶಾಧಿಕಾರಿ ಮೆಟ್ರೋ ಶಾಹುಲ್ ಹಮೀದ್ ಹಾಜಿ ಸನ್ಮಾನಿತರ ಪರಿಚಯ ಮಾಡಿದರು.

ಜಿಲ್ಲಾ ಉಪಾಧ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿ, ಹಾಸ್ಕೋ ಅಬ್ದುರ್ರಹ್ಮಾನ್ ಹಾಜಿ, ಮದರ್ ಇಂಡಿಯಾ ಅಬ್ದುಲ್ ಲತೀಫ್ ಹಾಜಿ, ಏರ್ ಇಂಡಿಯಾ ಉಸ್ಮಾನ್ ಹಾಜಿ, ಮೂಡುಬಿದಿರೆ ಟೌನ್ ಬದ್ರಿಯಾ ಜಮಾಅತ್ ಅಧ್ಯಕ್ಷ ಹಾಜಿ ಎಂ.ಎಚ್.ಇಕ್ಬಾಲ್, ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಾಲಿಕ್, ಕೋಶಾಧಿಕಾರಿ ಹಾಜಿ ಬಹಾವುದ್ದೀನ್, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಸ್ಸಲಾಂ ಯಮಾನಿ, ಮೂಡುಬಿದಿರೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಕಾರ್ಯದರ್ಶಿ ಶಬೀರ್ ಅಹ್ಮದ್, ಉಪಾಧ್ಯಕ್ಷ ಹೆಚ್.ಎ. ರಹ್ಮಾನ್, ಕೋಶಾಧಿಕಾರಿ ಅಶ್ರಫ್ ಮರೋಡಿ ಉಪಸ್ಥಿತರಿದ್ದರು.

ಅಬ್ದುಸ್ಸಲಾಂ ಯಮಾನಿ ಸ್ವಾಗತಿಸಿದರು. ಪರೀಕ್ಷಾ ಬೋರ್ಡ್ ಅಧ್ಯಕ್ಷ ಸಿದ್ದೀಕ್ ಮೌಲವಿ ಕಾರ್ಯಕ್ರಮ ನಿರೂಪಿಸಿದರು. ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ರಫೀಕ್ ದಾರಿಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News