×
Ad

ಉಪಗ್ರಹ ಫೋನ್ ಹೊಂದಿದ್ದ ಸೌದಿ ಪ್ರಜೆ ಪೊಲೀಸರ ವಶಕ್ಕೆ

Update: 2017-01-31 16:39 IST

ಜೈಪುರ,ಜ.31: ಉಪಗ್ರಹ ಫೋನ್ ಹೊಂದಿದ್ದ ಸೌದಿ ಅರೇಬಿಯಾದ ಪ್ರಜೆ ಯೋರ್ವನನ್ನು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.

ಮಾಹಿತಿಯ ಮೇರೆಗೆ ಸೋಮವಾರ ತಡರಾತ್ರಿ 48ರ ಹರೆಯದ ಈ ಸೌದಿ ಪ್ರವಾಸಿ ತಂಗಿದ್ದ ಸಾಮ್ ಪ್ರದೇಶದಲ್ಲಿಯ ರೆಸಾರ್ಟ್ ಮೇಲೆ ದಾಳಿನಡೆಸಿದ ಪೋಲಿಸರು ಆತನ ಬಳಿಯಿದ್ದ ಉಪಗ್ರಹ ಫೋನ್ ವಶಪಡಿಸಿಕೊಂಡರು.

ಉಪಗ್ರಹ ಫೋನ್‌ನ್ನು ಜೊತೆಯಲ್ಲಿರಿಸಿಕೊಳ್ಳುವುದಕ್ಕೆ ಮತ್ತು ಅದನ್ನು ಬಳಸಲು ಯಾವುದೇ ಅನುಮತಿಯನ್ನು ಆತ ಹೊಂದಿರಲಿಲ್ಲ. ಹೀಗಾಗಿ ಆತನನ್ನು ಮತ್ತು ಆತನೊಂದಿಗಿದ್ದ ನಾಲ್ವರು ಸ್ಥಳೀಯರನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News