ಉಳ್ಳಾಲ : ಎಸ್.ಡಿ.ಪಿ.ಐ ಯಿಂದ ' ಕರಾಳ ದಿನಾಚರಣೆ '
ಉಳ್ಳಾಲ, ಜ.31 : ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿ ಮತ್ತು ನೋಟು ಅಮಾನ್ಯೀಕರಣದ ವಿರುದ್ಧ ಎಸ್.ಡಿ.ಪಿ.ಐ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ದೇರಳಕಟ್ಟೆ ಹಾಗೂ ತೊಕ್ಕೊಟು ಬಸ್ಸು ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕರಾಳ ದಿನದ ಅಂಗವಾಗಿ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಕರಾಳ ದಿನದ ಆಚರಣೆಗೆ ಕಾರಣವಾದ ಆರ್ಥಿಕ ತುರ್ತು ಪರಿಸ್ಥಿತಿ, ಸಾಂಸ್ಕೃತಿಕ ಫ್ಯಾಸಿಸಂ, ರಾಜಕೀಯ ಫ್ಯಾಸಿಸಂ ಮತ್ತು ಅವುಗಳ ವಿರುದ್ಧದ ಎಸ್.ಡಿ.ಪಿ.ಐ ಹೋರಾಟದ ಕುರಿತು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹಾರಿಸ್ ಮಲಾರ್ ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಮಂಚಿ, ಕ್ಷೇತ್ರಾಧ್ಯಕ್ಷರಾದ ಲತೀಫ್ ಕೋಡಿಜಾಲ್, ಮುಡಿಪು ವಲಯಧ್ಯಕ್ಷರಾದ ಆಸಿಫ್ ಪಜೀರ್, ಕ್ಷೇತ್ರ ಸಮಿತಿ ಸದಸ್ಯರಾದ ಮೊಯ್ದಿನ್ ತಲಪಾಡಿ, ಶಹೀದ್ ಕಲ್ಕಟ್ಟ, ಝಾಹಿದ್ ಮಲಾರ್, ಹಸೈನಾರ್ ಕೊಣಾಜೆ ಹಾಗೂ ನೂರಕ್ಕೂ ಅಧಿಕ ಕಾರ್ಯಕರ್ತರು ಸೇರಿ ಸಾರ್ವಜನಿಕರಿಗೆ ಕರಪತ್ರ ವಿತರಿಸಿದರು .