×
Ad

ಫೆ.4, 5, 6ರಂದು ಪರ್ಲಡ್ಕದಲ್ಲಿ ‘ಕಲೋಪಾಸನಾ-2017’

Update: 2017-01-31 17:18 IST

ಪುತ್ತೂರು , ಜ.31 : ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್ ಪರ್ಲಡ್ಕ ಪುತ್ತೂರು ಇದರ ವತಿಯಿಂದ 13ನೇ ವರ್ಷದ ‘ಕಲೋಪಾಸನಾ-2017’ ಸಾಂಸ್ಕೃತಿಕ ಕಲಾ ಸಂಭ್ರಮ ಫೆ.4,5 ಮತ್ತು 6ರಂದು ಪರ್ಲಡ್ಕದಲ್ಲಿರುವ ರಿಸರ್ಚ್ ಸೆಂಟರ್‌ನ ಆವರಣದಲ್ಲಿ ನಡೆಯಲಿದೆ ಎಂದು ಸೆಂಟರ್‌ನ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.4ರಂದು ಕಾರ್ಯಕ್ರಮವನ್ನು ಸಾಹಿತಿ, ಕವಿ ಡಾ. ವಸಂತಕುಮಾರ್ ಪೆರ್ಲ ಉದ್ಘಾಟಿಸಲಿದ್ದಾರೆ.

ಬಳಿಕ ವಿದ್ವಾನ್ ಟಿ.ಎನ್.ಎಸ್ ಕೃಷ್ಣ ಚೆನ್ನೈ ಅವರ ಹಾಡುಗಾರಿಕೆಯಲ್ಲಿ ಕರ್ನಾಟಕ ಶಾಸ್ತ್ರಿಯ ಸಂಗೀತ ನಡೆಯಲಿದೆ. ವಿದ್ವಾನ್ ಡಾ. ಮುಲ್ಲೈವಾಸಲ್ ಮತ್ತು ಜಿ. ಚಂದ್ರಮೌಳಿ ವಯಲಿನ್, ವಿದ್ವಾನ್ ಕಾಂಚನ ಈಶ್ವರ ಭಟ್ ಮೃದಂಗ ಮತ್ತು ವಿದ್ವಾನ್ ಶ್ರೀಶೈಲ ಬೆಂಗಳೂರು ಘಟಂ ಸಾಥ್ ನೀಡಲಿದ್ದಾರೆ.

ಫೆ.5ರಂದು ‘ಹರ’ ಪುಣ್ಯ ನೃತ್ಯ ಕಂಪೆನಿ ಬೆಂಗಳೂರು ಇವರಿಂದ ಪಾರ್ಶ್ವನಾಥ ಎಸ್ ಉಪಾಧ್ಯ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಫೆ.6ರಂದು ಹಿರಿಯಡಕ ಮೇಳ ಮತ್ತು ಅತಿಥಿ ಕಲಾವಿದ ಕೂಡುವಿಕೆಯಿಂದ ತೆಂಕು ಮತ್ತು ಬಡಗು ತಿಟ್ಟು ಯಕ್ಷಗಾನ ‘ಕನಕಾಂಗಿ ಕಲ್ಯಾಣ’ ಮತ್ತು ‘ಇಂದ್ರಜಿತು’ ಪ್ರಸಂಗ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುನಾದ ಸಂಗೀತ ಶಾಲೆಯ ಸಂಚಾಲಕ ವಿದ್ವಾನ್ ಕಾಂಚನ ಈಶ್ವರ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News