ಕೋಟೆಕಾರ್ ಗುಡ್ಡಕ್ಕೆಪಾಲ್ ಕಾಂಕ್ರೀಟ್ ರಸ್ತೆ ಉದ್ಘಾಟನೆ
Update: 2017-01-31 17:21 IST
ಉಳ್ಳಾಲ , ಜ.31 : ಕೋಟೆಕಾರ್ ಪಟ್ಟಣ ಪಂಚಾಯತಿ ವ್ಯಾಪ್ತಿಯ 8ನೇ ವಾರ್ಡಿನ ಗುಡ್ಡಕ್ಕೆಪಾಲ್ ಹಾಗೂ ಹೊಸಹಿತ್ಲುವಿನಲ್ಲಿ 4.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯು ಇಂದಿಲ್ಲಿ ನಡೆಯಿತು.
ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಉದಯ ಶೆಟ್ಟಿ ಅವರು ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಅನಿಲ್ ಬಗಂಬಿಲ, ಕೌನ್ಸಿಲರ್ ಸುಮತಿ, ಹಿರಿಯರಾದ ಜೀವಾನಂದ ಶೆಟ್ಟಿ, ಮುತ್ತಣ್ಣ ಶೆಟ್ಟಿ, ರಮೇಶ್ ಕೊಂಡಾಣ ಹಾಗೂ ಗುಡ್ಡಕ್ಕೆಪಾಲ್ ಮತ್ತು ಹೊಸಹಿತ್ಲು ಪರಿಸರದ ನಾಗರಿಕರು ಉಪಸ್ಥಿತರಿದ್ದರು.