ಎಸ್‌ಡಿಪಿಐಯಿಂದ ಕರಾಳ ದಿನಾಚರಣೆ; ಜಾಗೃತಿ ಕರಪತ್ರ ಹಂಚಿಕೆ
Update: 2017-01-31 17:25 IST
ಉಳ್ಳಾಲ, ಜ.31: ಕೇಂದ್ರದ ಬಿಜೆಪಿ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ಎಸ್‌ಡಿಪಿಐ ಹಮ್ಮಿಕೊಂಡಿರುವ ಕರಾಳ ದಿನದ ಅಂಗವಾಗಿ ಪಕ್ಷದ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯು ದೇರಳಕಟ್ಟೆ ಹಾಗೂ ತೊಕ್ಕೊಟು ಬಸ್ ನಿಲ್ದಾಣದಲ್ಲಿ ಮಂಗಳವಾರ ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಿತು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹಾರಿಸ್ ಮಲಾರ್ ಕರಾಳ ದಿನದ ಆರ್ಥಿಕ ತುರ್ತು ಪರಿಸ್ಥಿತಿ, ಸಾಂಸ್ಕೃತಿಕ ಫ್ಯಾಸಿಸಂ, ರಾಜಕೀಯ ಫ್ಯಾಸಿಸಂ ವಿರುದ್ಧದ ಹೋರಾಟ ಕುರಿತು ಮಾಹಿತಿ ನೀಡಿದರು.
ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ, ಕ್ಷೇತ್ರಾಧ್ಯಕ್ಷ ಲತೀಫ್ ಕೋಡಿಜಾಲ್, ಮುಡಿಪು ವಲಯಧ್ಯಕ್ಷ ಆಸಿಫ್ ಪಜೀರ್, ಕ್ಷೇತ್ರ ಸಮಿತಿ ಸದಸ್ಯರಾದ ಮೊಯ್ದಿನ್ ತಲಪಾಡಿ, ಶಹೀದ್ ಕಲ್ಕಟ್ಟ, ಝಾಹಿದ್ ಮಲಾರ್, ಹಸೈನಾರ್ ಕೊಣಾಜೆ ಪಾಲ್ಗೊಂಡಿದ್ದರು.