ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ : ಎಸ್‌ಡಿಪಿಐ ಯಿಂದ ಜಿಲ್ಲಾ ಆರೋಗ್ಯಾಧಿಕಾರಿಯ ಭೇಟಿ
Update: 2017-01-31 17:34 IST
ಮಂಗಳೂರು , ಜ. 31 : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಕಣ್ಣೂರಿನ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಮತ್ತು ಸಮಸ್ಯೆಯ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಣ್ಣೂರು ವಾರ್ಡ್‌ನ ಸಮಿತಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಭೇಟಿಮಾಡಿ ಚರ್ಚಿಸಿತು .
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು 1 ವಾರದೊಳಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ಕೊಟ್ಟರು.
ಈ ಸಂದರ್ಭ ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುನೀಬ್ ಬೆಂಗ್ರೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸದಸ್ಯರಾದ ಇಕ್ಬಾಲ್ ಕೆತ್ತಿಕಲ್ ಹಾಗೂ ಅಮೀನ್ ಬಂದರ್, ಎಸ್‌ಡಿಪಿಐ ಕಣ್ಣೂರು ವಾರ್ಡ್‌ನ ಅಧ್ಯಕ್ಷ ಇಕ್ಬಾಲ್ ಕಣ್ಣೂರು, ಉಪಾಧ್ಯಕ್ಷರಾದ ನವಾರ್ ಕಣ್ಣೂರು ಹಾಗೂ ಸುಹೈಲ್ ಮಂಗಳೂರು ಉಪಸ್ಥಿತರಿದ್ದರು.