×
Ad

ನೀಲಿ ಬಣ್ಣಕ್ಕೆ ತಿರುಗುತ್ತಿರುವ ಅನ್ನಭಾಗ್ಯದ ಉಪ್ಪು!

Update: 2017-01-31 18:49 IST

ಮಂಗಳೂರು, ಜ.31: ರಾಜ್ಯ ಸರಕಾರವು ಅನ್ನಭಾಗ್ಯ ಯೋಜನೆಯಡಿ ಬಿಎಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸುತ್ತಿರುವ ಉಪ್ಪು ನೀಲಿಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ.

ಜಿಲ್ಲೆಯ ವಿವಿಧ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತಿರುವ ಈ ಉಪ್ಪನ್ನು ಇದೀಗ ಪಡಿತರ ಚೀಟಿದಾರರು ಬಳಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪು ಬಳಸಿದ ನೀರು ಮತ್ತು ಆಹಾರ ಸಾಮಗ್ರಿಗಳಾದ ಅನ್ನ, ಪದಾರ್ಥಗಳು ಕ್ಷಣಾರ್ಧದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತವೆ. ಅದರ ರುಚಿಯಲ್ಲೂ ವ್ಯತ್ಯಾಸ ಕಂಡಬರುತ್ತಿದ್ದು, ಕಬ್ಬಿಣದ ವಾಸನೆಯೂ ಬರುತ್ತದೆ. ಇದನ್ನು ಸೇವಿಸಿ ಹಲವಾರು ಮಂದಿ ವಾಂತಿ, ಬೇಧಿಗೆ ಒಳಗಾಗಿದ್ದಾರೆ. ಹಾಗಾಗಿ ಈ ಉಪ್ಪನ್ನು ಅಡುಗೆಗೆ ಬಳಸುವ ಬದಲು ಕೃಷಿ ಚಟುವಟಿಕೆಗೆ ಉಪಯೋಗಿಸುತ್ತಿದ್ದಾರೆ ಎಂದು ಉಪ್ಪಿನಂಗಡಿ ಸಮೀಪದ ಆದಮ್ ಬೆದ್ರೋಡಿ ವಳಾಲು ಎಂಬವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ತೊಂದರೆ ಇಲ್ಲ

ಈ ಕುರಿತಂತೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ದ.ಕ. ಜಿಲ್ಲಾ ಉಪನಿರ್ದೇಶಕ ಜಯಪ್ಪ, ಸರಕಾರದ ವತಿಯಿಂದ ನೀಡಲಾಗುವ ಈ ಉಪ್ಪಿನ ಪ್ಯಾಕೇಟ್‌ಗಳ ಮೇಲೆ ಇದನ್ನು ಬಳಸುವ ವಿಧಾನವನ್ನೂ ಸ್ಪಷ್ಟವಾಗಿ ನಮೂದಿಸಲಾಗಿದೆ. ಅದರಂತೆ ಬಳಸಿದರೆ ತೊಂದರೆ ಆಗದು. ಪ್ರಯೋಗಾಲಯದಲ್ಲಿ ಸೂಕ್ತ ತಪಾಸಣೆ ನಡೆಸಿದ ಬಳಿಕವೇ ನ್ಯಾಯಬೆಲೆ ಅಂಗಡಿಗಳಿಗೆ ಈ ಉಪ್ಪನ್ನು ವಿತರಿಸಲಾಗುತ್ತಿದೆ. ಉಪ್ಪಿನ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೂ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News