×
Ad

ಮಸೀದಿಗೆ ಕಲ್ಲೆಸೆತ: ಪಾಪ್ಯುಲರ್ ಫ್ರಂಟ್ ನಿಂದ ಖಂಡನೆ

Update: 2017-01-31 19:32 IST

ಉಡುಪಿ, ಜ.31: ಆದಿಉಡುಪಿ ಮಸೀದಿಗೆ ಕಲ್ಲೆಸೆದು ಹಾನಿಗೊಳಿಸಿರುವ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸಿದೆ.

ಈ ಹಿಂದೆ ಇದೇ ಮಸೀದಿಯ ಮೇಲೆ ಎರಡು ಬಾರಿ ಇಂತಹ ದಾಳಿ ನಡೆದಿದ್ದು, ಅದರ ಆರೋಪಿಯನ್ನು ಬಂಧಿಸದೆ ಇರುವುದರಿಂದ ಇದೀಗ ಮತ್ತೆ ದಾಳಿ ನಡೆದಿದೆ. ಆದುದರಿಂದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಪಿಎಫ್‌ಐ ಜಿಲ್ಲಾಧ್ಯಕ್ಷ ನಿಸಾರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News