×
Ad

ಡಿಕೆಎಂಎ ನಿಂದ ಗುರುತಿನ ಚೀಟಿ, ಆರೋಗ್ಯ ಕಾರ್ಡ್ ವಿತರಣೆ

Update: 2017-01-31 20:13 IST

ಮಂಗಳೂರು, ಜ.31: ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಶನ್ (ಡಿಕೆಎಂಎ) ವತಿಯಿಂದ ನಗರದ ಲೈಟ್‌ಹೌಸ್ ಹಿಲ್ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ 104 ಡಿಕೆಎಂಎ ಗುರುತಿನ ಚೀಟಿ ಹಾಗೂ ಯೆನೆಪೋಯ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿಕೆಎಂಎ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಅವರು, ಕಳೆದ ಡಿಸೆಂಬರ್‌ವರೆಗೆ ಫಲಾನುಭವಿಗಳಿಂದ ಬಂದಿರುವ ಎಲ್ಲಾ 294 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 104 ಗುರುತಿನ ಚೀಟಿ ಮತ್ತು ಆರೋಗ್ಯ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ಇಂದು ವಿತರಿಸಲಾಗಿದೆ. 150 ಮಂದಿ ಫಲಾನುಭವಿಗಳಿಗೆ ಈ ಮೊದಲೇ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಫೆಬ್ರವರಿ 2ರಂದು ಎಡಪದವುನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 40 ಕಾರ್ಡ್‌ಗಳನ್ನು ವಿತರಿಸಲಾಗುವುದು. ಸಂಸ್ಥೆಯಿಂದ ವಿತರಿಸಲಾಗಿರುವ ಆರೋಗ್ಯ ಕಾರ್ಡ್‌ಗಳಿಂದ ಫಲಾನುಭವಿಗಳು ಯನೆಪೋಯ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದು ಎಂದರು.

ಕುಟುಂಬದ ನಿರ್ವಹಣೆ ಹೊತ್ತ ಮನೆಯ ಯಜಮಾನನ ಹಠಾತ್ ನಿಧನದಿಂದ ಕಂಗೆಡುವ ಕುಟುಂಬಗಳಿಗೆ 2 ಲಕ್ಷ ರೂ.ಗಳ ನೆರವು ನೀಡುವ ಸಹಿತ ಇತರ ಧ್ಯೇಯೋದ್ದೇಶಗಳೊಂದಿಗೆ ಏಳು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಡಿಕೆಎಂಎ, ಈವರೆಗೆ ಅಂತಹ ಎರಡು ಕುಟುಂಬಗಳನ್ನು ಗುರುತಿಸಿ ತಲಾ 2 ಲಕ್ಷ ರೂ.ಗಳನ್ನು ಹಸ್ತಾಂತರಿಸಿದೆ. ಇನ್ನೊಂದು ಕುಟುಂಬವನ್ನು ಈಗಾಗಲೇ ಗುರುತಿಸಲಾಗಿದ್ದು, ಫೆಬ್ರವರಿ 6ರಂದು 2 ಲಕ್ಷ ರೂ.ಗಳ ಧನ ಸಹಾಯ ನೀಡಲಾಗುವುದು ಎಂದು ರಶೀದ್ ಹಾಜಿ ಮಾಹಿತಿ ನೀಡಿದರು.

ಡಿಕೆಎಂಎ ಉಪಾಧ್ಯಕ್ಷ ಆಝಾದ್ ಹಾರ್ಡ್‌ವೇರ್‌ನ ಮನ್ಸೂರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ (ಗ್ರೂಪ್ 4), ಕೋಶಾಧಿಕಾರಿ ಬಿ.ಎಸ್.ಬಶೀರ್, ಸಂಘಟನಾ ಕಾರ್ಯದರ್ಶಿ ಎಸ್.ಎಂ.ಫಾರೂಕ್, ಪಿ.ಅಬ್ದುರ್ರಝಾಕ್ ಫಜೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News