ಇಸ್ರೇಲ್ ವಸಾಹತುಗಳ ಬಗ್ಗೆ ಶೀಘ್ರ ತೀರ್ಪಿಗೆ ಫೆಲೆಸ್ತೀನ್ ಮನವಿ
Update: 2017-01-31 21:14 IST
ಜಿದ್ದಾ, ಜ. 31: ಇಸ್ರೇಲ್‌ನ ಮನೆ ನಿರ್ಮಾಣ ಯೋಜನೆಗಳು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಶೀಘ್ರ ತೀರ್ಪುಗಳನ್ನು ನೀಡುವಂತೆ ಫೆಲೆಸ್ತೀನ್ ಪ್ರಾಧಿಕಾರ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ವನ್ನು ಒತ್ತಾಯಿಸಿದೆ ಎಂದು ಅಧಿಕಾರಿಯೊಬ್ಬರು ‘ಅರಬ್ ನ್ಯೂಸ್’ಗೆ ತಿಳಿಸಿದ್ದಾರೆ.
ಇಸ್ರೇಲ್ ಸರಕಾರ ನಡೆಸುತ್ತಿರುವ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಗಳ ವಿರುದ್ಧ ನ್ಯಾಯಾಂಗ ತನಿಖೆ ಆರಂಭಿಸಲು ಸಾಧ್ಯವಾಗುವಂತೆ ಮೂರು ಫೆಲೆಸ್ತೀನ್ ಮೊಕದ್ದಮೆಗಳ ತೀರ್ಪುಗಳನ್ನು ಶೀಘ್ರವೇ ನೀಡುವಂತೆ ಐಸಿಸಿ ಮುಖ್ಯ ಪ್ರಾಸಿಕ್ಯೂಟರ್ ಫಟೂ ಬೆನ್ಸೋಡ ಅವರನ್ನು ಪ್ರಾಧಿಕಾರ ಕೋರಿದೆ ಎಂದು ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ)ನ ಪ್ರಧಾನ ಕಾರ್ಯದರ್ಶಿ ------ಸಯೀಬ್ ಇರೆಕಟ್------- ಹೇಳಿದರು.