×
Ad

ದೇರಳಕಟ್ಟೆ ‘ದಿ ಕಂಫರ್ಟ್ಸ್ ಇನ್’ ವಸತಿಗೃಹ ಉದ್ಘಾಟನೆ

Update: 2017-01-31 22:30 IST

ಕೊಣಾಜೆ , ಜ.31 : ಯಾವುದೇ ವ್ಯಾಪಾರ ವ್ಯವಹಾರದಲ್ಲೂ ಪ್ರಾಥಮಿಕವಾಗಿ ಬಹಳ ಸುಲಭವಾಗಿ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಲಾಭ ನಷ್ಟಗಳು ಇದ್ದೇ ಇರುತ್ತವೆ. ಆದರೆ ನಮ್ಮ ಪ್ರಾಮಾಣಿಕ ಪ್ರಯತ್ನ, ಪರಿಶ್ರಮದಿಂದ ಉತ್ತಮ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಎ.ಸದಾನಂದ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮುಂಭಾದಲ್ಲಿ ನಿರ್ಮಾಣಗೊಂಡಿರುವ ‘ದಿ ಕಂಫರ್ಟ್ ಇನ್’ ವಸತಿಗೃಹದ ಉದ್ಘಾಟನೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ದಿ ಕಂಫರ್ಟ್ಸ್ ಇನ್ ವಸತಿಗೃಹದ ಮಾಲಕ ಚಂದ್ರಹಾಸ್ ಶೆಟ್ಟಿ ಅವರು ಕಳೆದ ಹಲವಾರು ವರ್ಷಗಳಿಂದ ತಮ್ಮ ವ್ಯವಹಾರದಲ್ಲಿ ಸತತ ಪ್ರಯತ್ನ, ಪರಿಶ್ರಮದಿಂದ ಸಾಧನೆಯನ್ನು ಮಾಡುತ್ತಿದ್ದು ಅವರ ಮುಂದಿನ ಚಿಂತನೆಗಳು, ಉದ್ಯಮವು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಕಣಚೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಕೆ.ಮೋನು ಅವರು ಮಾತನಾಡಿ, ನಮ್ಮಲ್ಲಿ ಎಲ್ಲರೂ ಒಟ್ಟು ಸೇರಿ ಮುನ್ನಡೆಯುವ ಮನಸ್ಸು ಇರಬೇಕು . ಇಂತಹ ಮನಸ್ಸು ಇದ್ದರೆ ನಾವು ಸಮಾಜದಲ್ಲಿ ಉತ್ತಮ ಬಾಂಧವ್ಯದೊಂದಿಗೆ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿನಯ್ ಹೆಗ್ಡೆ ಅವರು, ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಲು ಖಂಡಿತಾ ಸಾಧ್ಯವಿದೆ. ಆದರೆ ಇದಕ್ಕಾಗಿ ನಾವು ಪಡುವ ನಿರಂತರ ಶ್ರಮ, ಸಾಧನೆ ಇದನ್ನು ನಿರ್ಧರಿಸುತ್ತದೆ. ಆದರೆ ಜೀವನದಲ್ಲಿ ಯಶಸ್ಸು ಬಂದಾಗ ಹಿಗ್ಗದೆ, ಸಂಕಷ್ಟ ಎದುರಾದಾಗ ಕುಗ್ಗದೆ ಮುನ್ನಡೆಯುವುದೇ ಜೀವನ. ದೇರಳಕಟ್ಟೆ ಉತ್ತಮ ಅಭಿವೃದ್ದಿ ಹೊಂದುತ್ತಿರುವ ಪ್ರದೇಶವಾಗಿದ್ದು ಈ ಭಾಗದಲ್ಲಿ ನಿರ್ಮಾಣವಾಗಿರುವ ದಿ ಕಂಫರ್ಟ್ಸ್ ಇನ್ ವಸತಿಗೃಹವು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಲಯನ್ ಅರುಣ್ ಶೆಟ್ಟಿ, ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಪೂಜಾರಿ, ಲಯನ್ಸ್ ಕ್ಲಬ್‌ನ ದೇವದಾಸ್ ಭಂಡಾರಿ, ಮಂಜುಶ್ರೀ ಸದಾನಂದ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಸತಿಗೃಹದ ಮಾಲಕ ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿಶೋರ್ ಶೆಟ್ಟಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News