×
Ad

ಬಿಎಡ್ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ

Update: 2017-01-31 23:43 IST

ಮಂಗಳೂರು, ಜ.31: ಪ್ರಸಕ್ತ (2016-17) ಶೈಕ್ಷಣಿಕ ಸಾಲಿನ ಎರಡು ವರ್ಷಗಳ ಬಿಎಡ್ ಕೋರ್ಸ್‌ನ ವ್ಯಾಸಂಗಕ್ಕಾಗಿ ರಾಜ್ಯದ ಎಲ್ಲ ಶಿಕ್ಷಣ ಮಹಾ ವಿದ್ಯಾಲಯಗಳಲ್ಲಿ ಸರಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿತ್ತು. ಇದೀಗ ಆಯ್ಕೆ ಪಟ್ಟಿಯನ್ನು ಕಾಲೇಜಿನ ಪ್ರಕಟನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಫೆ.4ರವರೆಗೆ ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸಿ, ಶುಲ್ಕವನ್ನು ಪಾವತಿಸಿ ದಾಖಲಾತಿ ಪಡೆಯಬಹುದು. ದ.ಕ. ಜಿಲ್ಲೆಯ ನೋಡಲ್ ಕೇಂದ್ರವು ಎನ್-22 ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮತ್ತು ಉಡುಪಿ ಜಿಲ್ಲೆಯ ನೋಡೆಲ್ ಕೇಂದ್ರ ಎನ್-34 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,(ಡಯೆಟ್)ಆಗಿದ್ದು, ಅರ್ಹ ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರ ಗಳೊಂದಿಗೆ ಪರಿಶೀಲನೆಗೆ ಹಾಜರಾಗಲು ಪ್ರಾಂಶುಪಾಲರು ಹಾಗೂ ಸಹ ನಿರ್ದೇಶಕ ನಾಗೇಂದ್ರ ಎಸ್. ಮಧ್ಯಸ್ಥ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News